ಬೀದರ್ : ಬೀದರ್ ಜಿಲ್ಲೆಯಲ್ಲಿ ಚಳಿಯ ಆರ್ಭಟ ಶುರುವಾಗಿದೆ. ಕಳೆದ ಒಂದು ವಾರದಿಂದ ಮೈ ಕೊರೆಯುವ ಭಾರಿ ಚಳಿಗೆ ಗಡಿನಾಡು ಗಡಗಡ ನಡಗುತ್ತಿದೆ. ಚಳಿಯಾರ್ಭಟಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಪ್ರತಿ ವರ್ಷ ಸಾಮಾನ್ಯವಾಗಿ ಡಿಸೆಂಬರ್ ಮತ್ತು ಜನವರಿಯಲ್ಲಿ ಚಳಿ ಹೆಚ್ಚಾಗಿರುತ್ತಿತ್ತು. ಆದರೆ ಈಗಲೇ ಚಳಿ ಶುರುವಾಗಿದ್ದು, ಇದರಿಂದ ರಕ್ಷಿಸಿಕೊಳ್ಳಲು ಜನರು ಸ್ವೆಟರ್, ಕೈಗೆ ಗ್ಲೌಸ್ ಹಾಗೂ ಮಂಕಿ ಟೋಪಿಗಳ ಮೊರೆ ಹೋಗಿದ್ದಾರೆ. ಕಳೆದೊಂದು ವಾರದಿಂದ ವಿಪರೀತ ಚಳಿ, ತಂಪುಗಾಳಿಯ ಜೊತೆಗೆ ಇರುಳು, ನಸುಕಿನ ಜಾವದಲ್ಲೂ ಮಂಜು ಕಾಣಿಸಿಕೊಳ್ಳುತ್ತಿದೆ.
ಮೈ ಕೊರೆಯುವ ಚಳಿಗೆ ಹೆಚ್ಚಿದ ಜನರ ಆರೋಗ್ಯ ಮೇಲೆ ವಿಪರಿತ ಪರಿಣಾಮ ಬೀರುತ್ತಿದೆ. ಶೀತ, ನೆಗಡಿ, ಜ್ವರ ಕೂಡ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ಚಳಿ ಕಡಿಮೆ ಇರುತ್ತಿತ್ತು. ಆದರೆ ಈ ವರ್ಷ ಸರಾಸರಿಕ್ಕಿಂತ ಕಡಿಮೆ ತಾಪಮಾನ ಇದೆ. ನ 28.ರಂದು 13 ಡಿಗ್ರಿ ತಾಪಮಾನವಿದ್ದು, ಇನ್ನೂ ಮೂರು ದಿನದಲ್ಲಿ ಮತ್ತೆ ಚಳಿ ಹೆಚ್ಚಾಗಲಿದ್ದೆ. ಹೀಗಾಗಿ ಜನರು ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಆರೋಗ್ಯದತ್ತ ಗಮನಹರಿಸಬೇಕು ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.