ಊಟ ಮಾಡುವಾಗ ಅಥವಾ ಏನನ್ನಾದರೂ ತಿನ್ನುವಾಗ ನಿಮಗೂ ಅನೇಕ ಬಾರಿ ಕೂದಲು ಸಿಕ್ಕಿರಬಹುದು. ಶಾಸ್ತ್ರಗಳ ಪ್ರಕಾರ, ಕೂದಲು ಸಿಕ್ಕಿರುವ ಆಹಾರವನ್ನು ನಾವು ಎಂದಿಗೂ ಸೇವಿಸಬಾರದು. ಇದು ರಾಹು ಮತ್ತು ಪಿತೃ ದೋಷವನ್ನು ಸೂಚಿಸುತ್ತದೆ. ನಾವು ಯಾವ ರೀತಿಯಾದ ಆಹಾರವನ್ನು ಸೇವಿಸುತ್ತೇವೆಯೋ ಅದೇ ರೀತಿ ನಮ್ಮ ಮನಸ್ಸು ಕೂಡ ಇರುತ್ತದೆ ಎನ್ನುವ ನಂಬಿಕೆಯಿದೆ. ಏಕೆಂದರೆ ಆಹಾರವೇ ಜೀವನದ ಆಧಾರ. ಅದಕ್ಕಾಗಿಯೇ ಶಾಸ್ತ್ರಗಳಲ್ಲಿ ಆಹಾರ ಅಥವಾ ಧಾನ್ಯಗಳ ಮಹತ್ವವನ್ನು ಉಲ್ಲೇಖಿಸಲಾಗಿದೆ.
ಚಿಲ್ಲರೆಗಳು ರಾಜಕಾರಣಕ್ಕೆ ಬಂದು ನಮ್ಮ ಸಂಸ್ಕೃತಿ ಹಾಳು ಮಾಡುತ್ತಿದ್ದಾರೆ: ಇಬ್ರಾಹಿಂ ಬೇಸರ!
ನಾವು ತಿಳಿದೋ ತಿಳಿಯದೆಯೋ ನಮ್ಮ ಸುತ್ತಲೂ ಕೆಲವು ಘಟನೆಗಳನ್ನು ನೋಡುತ್ತೇವೆ, ಅದು ಖಂಡಿತವಾಗಿಯೂ ನಮ್ಮ ಜೀವನದಲ್ಲಿ ಪರಿಣಾಮ ಬೀರುತ್ತದೆ. ವರ್ತಮಾನದಲ್ಲಿ ನಿಮ್ಮ ಜೀವನದಲ್ಲಿ ನಡೆಯುತ್ತಿರುವ ಒಂದು ಘಟನೆ ಭವಿಷ್ಯದಲ್ಲಿ ಏನಾಗಲಿದೆ ಎಂಬುದರ ಸಂಕೇತವೂ ಆಗಿರಬಹುದು. ಕೆಲವೊಮ್ಮೆ ಯಾವುದೋ ಒಂದು ಘಟನೆ ಮುಂಬರುವ ಸಮಯದಲ್ಲಿ ಏನಾದರೂ ಅಹಿತಕರ ಘಟನೆಯನ್ನು ಸೂಚಿಸುತ್ತದೆ, ಕೆಲವೊಮ್ಮೆ ವರ್ತಮಾನದಲ್ಲಿ ಏನಾದರೂ ಆದರೂ ಭವಿಷ್ಯದ ಮೇಲೆ ಪರಿಣಾಮ ಬೀರುವುದಿಲ್ಲ, ಕೆಲವೊಮ್ಮೆ ಅದರಿಂದ ನಿಮ್ಮ ಭವಿಷ್ಯದ ಜೀವನದಲ್ಲಿ ದೊಡ್ಡ ಸಮಸ್ಯೆ ತಂದಿಡುವ ಸಾಧ್ಯತೆ ಇದೆ.
ಅಂತಹ ಒಂದು ಘಟನೆ ಬಗ್ಗೆ ನಾವಿಲ್ಲಿ ಹೇಳ್ತೀವಿ. ಕೆಲವೊಮ್ಮೆ ನಾವು ಊಟ ಮಾಡೋವಾಗ ಊಟದಲ್ಲಿ ಕೂದಲು ಸಿಗುತ್ತೆ. ಇದರಿಂದ ನಮಗೆ ಇರಿಟೇಟ್ ಆಗುತ್ತೆ. ಆದರೆ ಊಟ ಪ್ರಾರಂಭಿಸಿದ ತಕ್ಷಣ ಅಥವಾ ಆಹಾರದ ತಟ್ಟೆಯಲ್ಲಿ ಆಗಾಗ್ಗೆ ಕೂದಲು ಸಿಗೋದು ಸಾಮಾನ್ಯ ಘಟನೆಯಲ್ಲ, ಇದು ನಿಮ್ಮ ಜೀವನದ ಮೇಲೆ ಪರಿಣಾಮವನ್ನು ಬೀರುವಂತಹ ಘಟನೆಯನ್ನು ಸೂಚಿಸುತ್ತೆ.
ನಿಮ್ಮ ಆಹಾರದಲ್ಲಿ ಪದೇ ಪದೇ ಕೂದಲು ಸಿಗುತ್ತಿದ್ರೆ ಜ್ಯೋತಿಷ್ಯದ ಪ್ರಕಾರ ಅದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ. ನೀವು ತಿನ್ನಲು ಪ್ರಾರಂಭಿಸಿದ ತಕ್ಷಣ ಅಥವಾ ಮೊದಲ ತುತ್ತಿನಲ್ಲಿ ಕೂದಲು ಸಿಕ್ಕಿದರೆ, ಅದು ಪಿತೃ ದೋಷಕ್ಕೆ ಪ್ರಮುಖ ಕಾರಣವಾಗಬಹುದು ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಇದು ಪೂರ್ವಜರ ಅಸಮಾಧಾನದ ಸಂಕೇತವೂ ಆಗಿರಬಹುದು. ನಿಮ್ಮ ಪೂರ್ವಜರಲ್ಲಿ ಒಬ್ಬರು ಕೋಪಗೊಂಡಾಗ ಮತ್ತು ಅವರ ಶಾಂತಿಗಾಗಿ ನೀವು ಯಾವುದೇ ಕ್ರಮ ತೆಗೆದುಕೊಳ್ಳದಿದ್ದಾಗ ಮಾತ್ರ ಇದು ಮತ್ತೆ ಮತ್ತೆ ಸಂಭವಿಸುತ್ತೆ. ಇದು ಒಂದು ಅಥವಾ ಎರಡು ಬಾರಿ ಸಂಭವಿಸಿದರೆ ಅದು ಸಾಮಾನ್ಯ., ಆದರೆ ಇದು ಮತ್ತೆ ಮತ್ತೆ ಸಂಭವಿಸಿದರೆ, ಪೂರ್ವಜರ ಶಾಂತಿಗಾಗಿ ನೀವು ಕ್ರಮಗಳನ್ನು ತೆಗೆದುಕೊಳ್ಳಬೇಕು.
ಆಹಾರದಲ್ಲಿ ಪದೇ ಪದೇ ಕೂದಲು ಸಿಗೋದು ಭವಿಷ್ಯದಲ್ಲಿ ಸಂಭವಿಸುವ ಕೆಲವು ಕೆಟ್ಟ ಘಟನೆಯ ಸಂಕೇತವಾಗಿರಬಹುದು. ಅಥವಾ ಜೀವನದಲ್ಲಿ ಉಂಟಾಗುವ ನಕಾರಾತ್ಮಕ ಬದಲಾವಣೆಯನ್ನ ಇದು ಸೂಚಿಸುತ್ತದೆ. ನೀವು ತಿನ್ನಲು ಕುಳಿತಾಗಲೆಲ್ಲಾ ನಿಮ್ಮ ತಟ್ಟೆಯಲ್ಲಿ ಕೂದಲು ಸಿಕ್ಕರೆ, ಅದು ಭವಿಷ್ಯದಲ್ಲಿ ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಕೂದಲಿರುವಂತಹ ಆಹಾರ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತೆ.
ಕೂದಲು ಶಕ್ತಿ ಮತ್ತು ಚೈತನ್ಯದೊಂದಿಗೆ ಸಂಬಂಧ ಹೊಂದಿದೆ, ಇದು ದೇಹದೊಳಗಿನ ಚೈತನ್ಯದ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತದೆ. ಆಹಾರದಲ್ಲಿ ಕೂದಲು ಪದೇ ಪದೇ ಕಾಣಿಸಿಕೊಂಡಾಗ, ಅದು ಶಕ್ತಿಯ ಹರಿವಿನಲ್ಲಿ ಅಡಚಣೆ ಅಥವಾ ಚೈತನ್ಯದಲ್ಲಿ ತೊಂದರೆಯ ಸೂಚನೆ. ಇದು ದೈಹಿಕ, ಭಾವನಾತ್ಮಕ ಅಥವಾ ಆಧ್ಯಾತ್ಮಿಕ ಅಸಮತೋಲನವನ್ನುಂಟು ಮಾಡಬಹುದು.
ನಕಾರಾತ್ಮಕತೆಯ ಸಂಕೇತ
ಆಹಾರದಲ್ಲಿ ಹಠಾತ್ ಕೂದಲು ಸಿಗೋದು ಕಲ್ಮಶದ ಸಂಕೇತ. ಜ್ಯೋತಿಷ್ಯದ ಪ್ರಕಾರ, ಇದರಿಂದ ಜೀವನದಲ್ಲಿ ನಕಾರಾತ್ಮಕ ಶಕ್ತಿ ಪ್ರಭಾವ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮ ಆಲೋಚನೆಗಳು ಮತ್ತು ಕ್ರಿಯೆಗಳನ್ನು ಶುದ್ಧವಾಗಿಡಬೇಕು. ಈ ಬಗ್ಗೆ ಎಚ್ಚರವಿರಲಿ.
ಒಬ್ಬ ವ್ಯಕ್ತಿಯ ಜಾತಕದಲ್ಲಿ ಪಿತ್ರ ದೋಷವಿದ್ದರೆ, ಅವನು ಹಲವು ಸಮಸ್ಯೆ ಹೊಂದಬಹುದು. ಆಹಾರದಲ್ಲಿ ಕೂದಲು ಸಿಗೋದು ಸಹ ಪಿತೃ ದೋಷಕ್ಕೆ ಕಾರಣ. ಪಿತೃ ದೋಷ ನಿವಾರಣೆಗಾಗಿ ನೀವು ಜ್ಯೋತಿಷಿಗಳ ಸಹಾಯ ಪಡೆದುಕೊಳ್ಳಬಹುದು. ಇಲ್ಲಾಂದ್ರೆ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ