ಈಗೇನಿದ್ರು ಇಂಟರ್ ನೆಟ್ ಯುಗ. ಕೈಬೆರಳ ತುದಿಯಲ್ಲೇ ಎಲ್ಲವೂ ಕ್ಷಣಾರ್ಧದಲ್ಲಿ ಸಿಕ್ಕಿ ಬಿಡುತ್ತೆ. ನೀವು ಇಂಟರ್ ನೆಟ್ ಬಳಸುವಾಗ ಕೊಂಚ ಸ್ಪೀಡ್ ಕಮ್ಮಿಯಾದ್ರು ಮನಸ್ಸು ವಿಲ ವಿಲ ಒದ್ದಾಡಿ ಬಿಡುತ್ತೆ. ಹಾಗಾದ್ರೆ ನಿಮ್ಮ ಇಂಟರ್ ನೆಂಟ್ ಫಾಸ್ಟ್ ಆಗಿ ವರ್ಕ್ ಆಗಬೇಕು ಅಂದರೆ ಏನ್ ಮಾಡಬೇಕು ಅನ್ನೋದು ಇಲ್ಲಿದೆ ನೋಡಿ.
ನಿಮ್ಮ ವೈಫೈ ವೇಗ ಹೆಚ್ಚಿಸಲು ಮನೆಯಲ್ಲಿರುವ ಮೈಕ್ರೋವೇವ್ ಅನ್ನು ಮೊದಲು ಆಫ್ ಮಾಡಿರಿ. ಕಾರಣ ವೈಫೈ ಹಾಗೂ ಮೈಕ್ರೋವೇವ್ 2.4GHz ನ ಒಂದೇ ಫ್ರಿಕ್ವೆನ್ಸಿಯಲ್ಲಿ ಚಾಲಿತವಾಗಿರುತ್ತವೆ. ಎರಡು ಒಂದೇ ವೇಳೆ ಚಾಲಿತವಾಗಿದ್ದಲ್ಲಿ ನಿಮ್ಮ ವೈಫೈ ವೇಗ ಕಡಿಮೆಯಾಗುತ್ತದೆ. ಹಾಗಾಗಿ ಮೈಕ್ರೋವೇವ್ ಮೊದಲು ಆಫ್ ಬಳಿಕ ವೈಫೈ ಬಳಕೆ ಮಾಡಿ.
ರೂಟರ್ ಅನ್ನು ತೆರೆದ ಪ್ರದೇಶದಲ್ಲಿ ಇಡಿ. ಅಂದರೆ ಅದರ ಸುತ್ತ ಮುತ್ತ ಖುರ್ಚಿಗಳು, ವೈರ್ಲೆಸ್ ಸಿಗ್ನಲ್ ಅನ್ನು ತಡೆ ಹಿಡಿಯುವ ಯಾವುದೇ ಇತರೆ ವಸ್ತುಗಳು ಇರದ ಹಾಗೆ ನೋಡಿಕೊಳ್ಳಿ. ಉದಾಹರಣೆಗೆ ಫಿಶ್ ಟ್ಯಾಂಕ್ ಮತ್ತು ಅಕ್ವೇರಿಯಂಗಳು ವೈರ್ಲೆಸ್ ಸಿಗ್ನಲ್ಗಳನ್ನು ತಡೆಹಿಡಿಯುತ್ತವೆ ಎಂದು ಸಂಶೋಧನೆಯೊಂದು ತಿಳಿಸಿದೆ. ಆದ್ದರಿಂದ ಅವುಗಳನ್ನು ಬೇರೆ ಸ್ಥಳಕ್ಕೆ ರವಾನಿಸಿ. ಅಲ್ಲದೇ ಟಿವಿ, ಮಾನಿಟರ್ಗಳು, ಕಂಪ್ಯೂಟರ್ ಸ್ಪೀಕರ್ಗಳು, ಬೇಬಿ ಮಾನಿಟರ್ಗಳು, ಕಾರ್ಡ್ಲೆಸ್ ಫೋನ್ಸ್, ಹಾಲೊಜೆನ್ ಲ್ಯಾಂಪ್, ಸ್ಟೀರಿಯೋಗಳನ್ನು ಆದಷ್ಟು ದೂರದಲ್ಲಿಡಿ.
ರೂಟರ್ಗಳು, ಕಂಪ್ಯೂಟರ್ಗಳು, ಟಿವಿಗಳು, ಇತರೆ ನೆಟ್ವರ್ಕ್ ಲಭ್ಯ ಡಿವೈಸ್ಗಳಲ್ಲಿ ಬಳಸುವ ಎತರ್ನೆಟ್ ಕೇಬಲ್ ಗಳನ್ನು ಬಳಕೆ ಮಾಡಿ. ವೈರ್ಲೆಸ್ ಸಂಪರ್ಕಗಳಿಗಿಂತ ಎತರ್ನೆಟ್ ಮತ್ತು ಲ್ಯಾನ್ ಸಂಪರ್ಕಗಳ ವೇಗ ಹೆಚ್ಚು ಎಂಬುದರಲ್ಲಿ ಯಾವುದೇ ಸಂಶಯಬೇಡ. ಎತರ್ನೆಟ್ ಕೇಬಲ್ಗಳು ವೇಗವಾದ ಡಾಟಾ ವರ್ಗಾವಣೆ, ಕಡಿಮೆ ಸುಪ್ತತೆ, ನಿರಂತರ ಇಂಟರ್ನೆಟ್ ವೇಗವನ್ನು ನೀಡುತ್ತವೆ.
ನಿಮ್ಮ ವೈಫೈ ರೂಟರ್ನಲ್ಲಿ ಹೆಚ್ಚಿನ ವೇಗದ ಇಂಟರ್ನೆಟ್ ಸಂಪರ್ಕ ಪಡೆಯಬೇಕು ಎಂದರೆ ಸಂಪರ್ಕ ಸಾಧನಗಳನ್ನು ಕಡಿಮೆಗೊಳಿಸಿ. ನಿಮ್ಮ ಯಾವುದೇ ಸಾಧನವು ಬಳಕೆಯಾಗದೆ ನಿಷ್ಕ್ರಿಯಗೊಂಡಿರಬಹುದು, ಆದರೆ ಅದು ನಿಮ್ಮ ವೈರ್ಲೆಸ್ ನೆಟ್ವರ್ಕ್ಗೆ ಕನೆಕ್ಟ್ ಆಗಿದ್ದರೆ, ಅದು ಸಹ ನಿಮ್ಮ ಬ್ಯಾಂಡ್ವಿಡ್ತ್ ಬಳಕೆ ಮಾಡುತ್ತಿರುತ್ತದೆ ಮತ್ತು ವೇಗ ಕಡಿಮೆ ಆಗಲು ಕಾರಣವಾಗುತ್ತದೆ.