ಬದಲಾಗುತ್ತಿರುವ ಕಾಲಘಟ್ಟದಲ್ಲಿ ಎಲ್ಲರೂ ಒಂದಿಲ್ಲೊಂದು ಒತ್ತಡವನ್ನು ಎದುರಿಸುತ್ತಲೇ ಇದ್ದೇವೆ.
ಕೇವಲ ಕೆಲಸಕ್ಕೆ ಹೋಗುವವರಷ್ಟೇ ಅಲ್ಲ ಮನೆಯಲ್ಲೇ ಇರುವವರೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೋವಿಡ್ ಕಾಲದ ನಂತರದಲ್ಲಿ ಇನ್ನೂ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗಿದೆ.
ಇದರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಯೂ ಒಂದಾಗಿದೆ. ಒತ್ತಡವು ದೇಹ ಮತ್ತು ಮನಸ್ಸು ಅಗಾಧವಾಗಿ ಕಂಡುಬರುವ ಸಂದರ್ಭಗಳಿಗೆ ಶಾರೀರಿಕ ಮತ್ತು ಮಾನಸಿಕ ಪ್ರತಿಕ್ರಿಯೆಯಾಗಿದೆ.
ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ತರಕಾರಿಗಳು ಕಂಡಿತವಾಗಿಯೂ ನಿಮಗೆ ಸಹಾಯವಾಗಲಿದೆ.
ದೇಹಕ್ಕೆ ನಿತ್ಯವೂ ಬೇಕಾಗಿರುವ ವಿಟಮಿನ್ ಸಿ ಅಂಶದ ಶೇ.65ರಷ್ಟು ಗೆಣಸಿನಲ್ಲಿ ಇದೆ. ಗ್ಲೈಸೆಮಿಕ್ ಇಂಡೆಕ್ಸ್ 17 ಆಗಿದ್ದು, ಗೆಣಸಿನಲ್ಲಿ ಅತ್ಯಧಿಕ ಪ್ರಮಾಣದ ಆಹಾರದ ನಾರಿನಾಂಶವಿದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುವುದು. ಇದರಿಂದ ಹೊಟ್ಟೆಯ ಕೊಬ್ಬು ಕರಗುವುದು.
ಬೀನ್ಸ್ ನಲ್ಲಿ ಪ್ರಮುಖ ಪೋಷಕಾಂಶಗಳಿದ್ದು, ಇದರಲ್ಲಿ ಲೈಸಿನ್ ಎನ್ನುವ ಅಮಿನೋ ಆಮ್ಲವಿದ್ದು, ಇದು ದೇಹದಲ್ಲಿನ ಕೊಬ್ಬಿನಾಮ್ಲವನ್ನು ಶಕ್ತಿಯಾಗಿ ಪರಿವರ್ತನೆ ಮಾಡುವುದು ಮತ್ತು ಕೊಲೆಸ್ಟ್ರಾಲ್ ತಗ್ಗಿಸುವುದು. ಇದರಲ್ಲಿ ವಿಟಮಿನ್ ಬಿ ಅಂಶವಿದ್ದು, ಇದು ನರಪ್ರೇಕ್ಷಕಗಳ ಮೇಲೆ ಪರಿಣಾಮ ಬೀರುವುದು. ಇದರಿಂದ ಮನಸ್ಥಿತಿಯು ಉತ್ತಮವಾಗಿರುವುದು.
ಕುಂಬಳಕಾಯಿ ಇದರಲ್ಲಿ ಫಾಲಿಕ್ ಆಮ್ಲ, ಮ್ಯಾಂಗನೀಸ್, ವಿಟಮಿನ್ ಸಿ ಹಾಗೂ ಸತುವಿನ ಅಂಶವಿದ್ದು, ಇದು ದೇಹದಲ್ಲಿ ಪ್ರತಿರೋಧಕ ಶಕ್ತಿ ವೃದ್ಧಿಸಲು ಸಹಕಾರಿ. ಇದರಲ್ಲಿ ಕ್ಯಾಲರಿ ತುಂಬಾ ಕಡಿಮೆ ಇದ್ದು, ನಾರಿನಾಂಶವು ಉತ್ತಮ ಪ್ರಮಾಣದಲ್ಲಿದೆ. ಇದರಿಂದ ತೂಕ ಇಳಿಕೆಗೆ ಇದು ಸಹಕಾರಿ.
ಬ್ರಸೆಲ್ ಮೊಗ್ಗುಗಳು ಪೋಷಕಾಂಶಗಳು ಇರುವಂತಹ ತರಕಾರಿಗಳನ್ನು ಸೇವನೆ ಮಾಡಿದರೆ, ಅದರಿಂದ ಮೂಳೆಯ ಆರೋಗ್ಯ, ಮಧುಮೇಹ ನಿರ್ವಹಣೆ, ಹೃದಯದ ಕಾಯಿಲೆ ಅಪಾಯ ತಗ್ಗಿಸುವುದು ಮತ್ತು ಕ್ಯಾನ್ಸರ್ ತಡೆಯಲು ಸಹಕಾರಿ ಆಗಿರುವುದು.