ಗದಗ: 2025 ರ ಹೊಸ ವರ್ಷಾಚರಣೆಯನ್ನ ಸಂಭ್ರಮದಿಂದ ಆಚರಿಸಲು ಗದಗ ಮಂದಿ ಸಜ್ಜಾಗಿದ್ದಾರೆ. ಹೊಸ ವರ್ಷದ ಆಗಮನವನ್ನ ಕೇಕ್ ಕತ್ತರಿಸೋ ಮೂಲಕ ಆಚರಿಸಲು ಮುಂದಾಗಿದ್ದು ಕೇಕ್ ಗಳ ತಯಾರಿ ಕೂಡಾ ಬಲು ಜೋರಾಗಿದೆ.
ಟೀಂ ಇಂಡಿಯಾ ಅಭಿಮಾನಿಗಳಿಗೆ ಸಿಕ್ತು ಭರ್ಜರಿ ಗುಡ್ನ್ಯೂಸ್: ಏನದು ಗೊತ್ತಾ?
ಗದಗನ ಸಾಸನೂರ ಬೇಕರಿಯಲ್ಲಿ ಹೊಸ ವರ್ಷಕ್ಕೆಂದೇ ವಿಶೇಷ ಕೋಲ್ಡ್ ಮತ್ತು ಪೇಸ್ಟ್ರಿ ಕೇಕ್ ಗಳನ್ನ ತಯಾರಿಸಲಾಗಿದೆ. ಡ್ರೈ ಫ್ರೂಟ್ಸ್ ಒಳಗೊಂಡ ಪೈನಾಪಲ್, ಆರೇಂಜ್, ಚಾಕೊಲೇಟ್, ಸ್ಟ್ರಾಬೆರಿ, ವೆನಿಲ್ಲಾ, ಮ್ಯಾಂಗೋ, ಪಿಸ್ತಾ ಪ್ಲೇವರ್ ಗಳ ಕೇಲ್ ಗಳಿಗೆ ಬೇಡಿಕೆ ಹೆಚ್ಚಾಗಿದ್ದು ಗ್ರಾಹಕರು ತಮಗಿಷ್ಟವಾದ ಪ್ಲೇವರ್’ನ ಕೇಕ್ ಗಳನ್ನ ಖರೀದಿಸಿ ಮನೆಗೆ ಕೊಂಡೊಯ್ಯುತ್ತಿದ್ದಾರೆ. ಆ ಮೂಲಕ ಮನೆ ಮಂದಿ ಎಲ್ಲಾ ಸೇರಿ ರಾತ್ರಿ 12 ಘಂಟೆಗೆ ಕೇಕ್ ಕತ್ತರಿಸೋ ಮೂಲಕ ಹೊಸ ವರ್ಷದ ಸ್ವಾಗತಕ್ಕೆ ಮುಂದಾಗಿದ್ದಾರೆ.