ಬೆಂಗಳೂರು: ಲೋಕಸಭೆಗೆ ಮಾತ್ರವಲ್ಲ ಮುಂಬರುವ ಪರಿಷತ್ & ಬಿಬಿಎಂಪಿ ಚುನಾವಣೆಯಲ್ಲೂ ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಬಿಜೆಪಿ ಹೈಕಮಾಂಡ್ ಜೊತೆ ಚರ್ಚೆ ನಡೆಸಿದೆ.
ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಕರ್ನಾಟಕದಲ್ಲಿ ತಕ್ಷಣವೇ ವಿಧಾನ ಪರಿಷತ್ ಚುನಾವಣೆ ಎದುರಾಗಲಿದೆ ಇಲ್ಲೂ ಮೈತ್ರಿ ಕುರಿತು ಚರ್ಚೆ ನಡೆಸಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ
ಈ ಬಗ್ಗೆ ಮೈತ್ರಿ ಕುರಿತು ದೇವೇಗೌಡರು ಮತ್ತು ಕುಮಾರಸ್ವಾಮಿ ಗೆ ಸಲಹೆ ಕೊಟ್ಟ ಸ್ಥಳೀಯ ರಾಜ್ಯ ಜೆಡಿಎಸ್ ನಾಯಕರು ‘ಲೋಕ’ ಮೈತ್ರಿ ಮಾತುಕತೆ ಫೈನಲ್ ವೇಳೆ ಪರಿಷತ್ ವಿಚಾರ ಪ್ರಸ್ತಾಪ ಮಾಡಲು ಹೆಚ್ಡಿಕೆ ಚಿಂತನೆ ನಡೆಸಿದ್ದು ಮುಂದೆ ಬರಲಿರುವ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರ ಪರಿಷತ್ ಚುನಾವಣೆ ಮೈತ್ರಿ ಸಿದ್ದತೆ ಕೂಡ ನಡೆಯುತ್ತಿದೆ.
1.ಬೆಂಗಳೂರು ಪದವೀದರರ ಕ್ಷೇತ್ರ
2.ಬೆಂಗಳೂರು ಶಿಕ್ಷಕರ ಕ್ಷೇತ್ರ
3.ದಕ್ಷಿಣ ಶಿಕ್ಷಕರ ಕ್ಷೇತ್ರ
4.ನೈರುತ್ಯ ಶಿಕ್ಷಕರ ಕ್ಷೇತ್ರ
5.ಆಗ್ನೇಯ ಶಿಕ್ಷಕರ ಕ್ಷೇತ್ರ
6.ಈಶಾನ್ಯ ಪದವಿದರರ ಕ್ಷೇತ್ರ
7.ನೈರುತ್ಯ ಪದವಿದರ ಕ್ಷೇತ್ರಕ್ಕೆ ಜೂನ್ ನಲ್ಲಿ ಚುನಾವಣೆ
ಜೆಡಿಎಸ್ ಪ್ರಬಲವಾಗಿರುವ ಕಡೆ ಟಿಕೆಟ್ ಪಡೆದು , ಉಳಿದ ಕಡೆ ಬಿಜೆಪಿಗೆ ಬೆಂಬಲ ನೀಡಿ ಕೈ ಅಭ್ಯರ್ಥಿ ಸೋಲಿಸಲು ಚರ್ಚೆ ಹಾಗೆ ಪರಿಷತ್ ಚುನಾವಣೆ ಮೈತ್ರಿ ಗೆ ಉಭಯ ನಾಯಕರು ಗ್ರೀನ್ ಸಿಗ್ನಲ್ ಕೊಟ್ರೆ ಸ್ಥಳೀಯ ಚುನಾವಣೆ ಮೈತ್ರಿ ಬಗ್ಗೆ ಬಿಜೆಪಿ , ಜೆಡಿಎಸ್ ನಾಯಕರು ಶೀಘ್ರದಲ್ಲೇ ಮಾತುಕತೆ ನಡೆಸಲಿದ್ದಾರೆ
ಮೈತ್ರಿ ಮೂಲಕ ಪರಿಷತ್ ಮತ್ತು ಬಿಬಿಎಂಪಿ ಚುನಾವಣೆಯಲ್ಲೂ ಕಾಂಗ್ರೆಸ್ ಸೋಲಿಸಲು ಪ್ಲಾನ್ ಮಾಡಿರುವ ದಳಪತಿಗಳು