ಆಮ್ಸ್ಟರ್ಡ್ಯಾಮ್: ಇಸ್ಲಾಂ ವಿರೋಧಿ ನಿಲುವುಗಳಿಗೆ ಹೆಸರುವಾಸಿಯಾಗಿದ್ದ ಡಚ್ ಬಲಪಂಥೀಯ ನಾಯಕ ಗೀರ್ಟ್ ವೈಲ್ಡರ್ಸ್ (Geert Wilders) ಅವರು ನೆದರ್ಲೆಂಡ್ಸ್ (Netherlands) ಸಂಸತ್ತಿನ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದಾರೆ. ಚುನಾವಣೆಯಲ್ಲಿ ಗೆದ್ದಿರುವ ಹಿನ್ನೆಲೆ ಗೀರ್ಟ್ ವೈಲ್ಡರ್ಸ್ ನೆದರ್ಲೆಂಡ್ಸ್ʼನ ನೂತನ ಪ್ರಧಾನಿಯಾಗಿ (PM) ಪ್ರಮಾಣವಚನ ಸ್ವೀಕರಿಸಲು ಸಿದ್ಧರಾಗಿದ್ದಾರೆ ಎಂದು ವರದಿಯಾಗಿದೆ.
Kambala: ಬೆಂಗಳೂರಲ್ಲಿ ಅದ್ದೂರಿಯಾಗಿ ನ. 25, 26ರಂದು ನಡೆಯಲಿರುವ ನಮ್ಮ ಕಂಬಳ: ಹೇಗಿದೆ ಸಿದ್ಧತೆ!
ಈ ಹಿಂದೆ ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ವಿವಾದಾತ್ಮಕವಾದ ಹೇಳಿಕೆಗಳನ್ನು ನೀಡಿ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ (Nupur Sharma) ಅವರನ್ನು ವೈಲ್ಡರ್ಸ್ ಬೆಂಬಲಿಸಿದ್ದರು. ಇದೀಗ ಬಲಪಂಥೀಯ, ಇಸ್ಲಾಂ ವಿರೋಧಿ ಜನಪರವಾದಿ ಗೀರ್ಟ್ ವೈಲ್ಡರ್ಸ್ ಅವರು ವಿಶ್ವ ಸಮರ 2ರ ನಂತರ ಡಚ್ ರಾಜಕೀಯದಲ್ಲಿ ದೊಡ್ಡ ಅಲೆ ಎಬ್ಬಿಸಿದ್ದಾರೆ. ದೇಶದ ಮೊದಲ ಬಲಪಂಥೀಯ ಪ್ರಧಾನಿಯಾಗಲು ಮುಂದಾಗಿದ್ದಾರೆ.