ಜಿನೆವ : ಗಾಝಾದ ಕಮಲ್ ಅಡ್ವಾನ್ ಆಸ್ಪತ್ರೆಯ ನಿರ್ದೇಶಕ ಹೊಸಮ್ ಅಬು ಸಫಿಯೆಹ್ ಅವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಇಸ್ರೇಲನ್ನು ಆಗ್ರಹಿಸಿದೆ.
ಶುಕ್ರಗಾಝಾ ಆಸ್ಪತ್ರೆಯ ನಿರ್ದೇಶಕರನ್ನು ಬಿಡುಗಡೆ ಮಾಡಲು ಇಸ್ರೇಲ್ಗೆ ವಿಶ್ವ ಆರೋಗ್ಯ ಸಂಸ್ಥೆ ಆಗ್ರಹಧಿಸಿತ್ತು ಮತ್ತು ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ತೆರವುಗೊಳಿಸಿತ್ತು. `ಗಾಝಾದಲ್ಲಿನ ಆಸ್ಪತ್ರೆಗಳು ಮತ್ತೊಮ್ಮೆ ಯುದ್ಧಭೂಮಿಗಳಾಗಿವೆ ಮತ್ತು ಆರೋಗ್ಯ ವ್ಯವಸ್ಥೆಗೆ ಗಂಭೀರ ಬೆದರಿಕೆ ಎದುರಾಗಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಟೆಡ್ರೋಸ್ ಅಧನಾಮ್ ಘೆಬ್ರೆಯೇಸಸ್ ಕಳವಳ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಅಕ್ಟೋಬರ್ 7 ರಿಂದ, ಗಾಜಾದ ಮೇಲಿನ ಇಸ್ರೇಲ್ ಯುದ್ಧವು ಕನಿಷ್ಠ 45,484 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದೆ ಮತ್ತು 108,090 ಮಂದಿ ಗಾಯಗೊಂಡಿದ್ದಾರೆ. ಅದೇ ಅವಧಿಯಲ್ಲಿ, ಹಮಾಸ್ ನೇತೃತ್ವದ ದಾಳಿಯ ಸಮಯದಲ್ಲಿ ಇಸ್ರೇಲ್ ನಲ್ಲಿ ಕನಿಷ್ಠ 1,139 ಜನರು ಕೊಲ್ಲಲ್ಪಟ್ಟರು , 200 ಕ್ಕೂ ಹೆಚ್ಚು ಜನರು ಸೆರೆಯಾಳಾಗಿದ್ದರು.
ಕಮಲ್ ಅಡ್ವಾನ್ ಆಸ್ಪತ್ರೆಯ ಮೇಲೆ ದಾಳಿ ನಡೆಸಿದ ಇಸ್ರೇಲ್ ಬಂಧಿತರನ್ನು ಬಿಡುಗಡೆ ಮಾಡಲಾಗಿದೆ, ಆದರೆ ಆಸ್ಪತ್ರೆಯ ನಿರ್ದೇಶಕ ಹುಸಾಮ್ ಅಬು ಸಫಿಯಾ ಅವರ ಭವಿಷ್ಯವು ತಿಳಿದಿಲ್ಲ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.