ಕೊಪ್ಪಳ : ಗವಿಮಠದ ಅದ್ದೂರಿಯಾಗಿ ನಡೆದ ಜಾತ್ರಮಹೋತ್ಸವ ಸಂಪನ್ನಗೊಂಡಿದೆ.. ಕಳೆದ ಶುಕ್ರವಾರ ಸಂಜೆ ಜಾತ್ರೆಯ ಸಮಾರೋಪ ಸಮಾರಂಭವು ನಡೆಯಿತು.. ಈ ವೇಳೆ ಮಾತನಾಡಿದ ಗವಿಮಠದ ಪೀಠಾಧಿಪತಿ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಭಾವುಕ ನುಡಿಗಳನ್ನಾಡಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ತಮ್ಮ ಭಕ್ತರನ್ನುದ್ದೇಶಿಸಿ ಮಾತನಾಡಿದ ಶ್ರೀಗಳು, ಸಾಮಾಜಿಕ ಜಾಲತಾಣದಲ್ಲಿನ ಪರ-ವಿರೋಧದ ಚರ್ಚೆಗಳ ಬಗ್ಗೆ ಮಾತನಾಡಿ ಭಕ್ತರ ಎದುರೇ ಕಣ್ಣೀರು ಹಾಕಿದ್ರು. ಈಗ ರೈಲು ನಿಲ್ದಾಣ, ಮುಂದೆ ವಿಮಾನ ನಿಲ್ದಾಣ, ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಿ ಎನ್ನುತ್ತೀರಿ ಅದ್ಯಾವುದೂ ಬೇಡ. ನನನಗೆ ಪ್ರಶಸ್ತಿ ಕೊಡಬೇಕು ಎಂದು ಯಾರೂ ಸಹ ಶಿಫಾರಸು ಮಾಡಬೇಡಿ. ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಹಾಕಬೇಡಿ. ಬಂದ ಪ್ರಶಸ್ತಿ ತಿರಸ್ಕರಿಸುವಷ್ಟು ದೊಡ್ಡವನು ನಾನಲ್ಲ. ಆದರೆ ಅದನ್ನು ತೆಗೆದುಕೊಳ್ಳುವ ಅರ್ಹತೆ ನನಗಿಲ್ಲ ಎಂದುಕೊಂಡಿದ್ದೇನೆ ಎಂದು ಭಾವುಕರಾದರು. ಇದೇ ವೇಳೆ ನಮ್ಮ ಮಠವನ್ನು ಬೇರೆ ಮಠಕ್ಕೆ ಹೋಲಿಕೆ ಮಾಡಬೇಡಿ. ನಮ್ಮನ್ನು ಗವಿಮಠದ ಆವರಣ ಬಿಟ್ಟು ಹೊರಕ್ಕೆ ತಗೆದುಕೊಂಡು ಹೋಗಬೇಡಿ. ಯಾವುದೇ ಪ್ರಶಸ್ತಿಗಳು ನಮಗೆ ಬೇಡ. ಈ ಮೂರನ್ನು ಮಾಡಬೇಡಿ ಎಂದು ಭಕ್ತರಿಗೆ ಮನವಿ ಮಾಡಿದರು.