ಕೊಪ್ಪಳ ಗವಿಮಠದ ಆವರಣದಲ್ಲಿ ಇಂದು ಹುಲಿ ಚಿರತೆ ಬೆಕ್ಕು ಸೇರಿದಂತೆ ಪ್ರಾಣಿ ಪಕ್ಷಿಗಳು ಆಕಾಶದಲ್ಲಿ ಹಾರಾಡಿದವು. ಹೌದು ಕೊಪ್ಪಳದ ಗವಿಮಠ ಜಾತ್ರೆ ಮಹೋತ್ಸವ ನಿಮಿತ್ತ ಗಾಳಿಪಟ ಹಬ್ಬವನ್ನು ಹಮ್ಮಿಕೊಳ್ಳಲಾಗಿತ್ತು. ದೊಡ್ಡ ದೊಡ್ಡ ಗಾತ್ರದ ಹುಲಿ ಚಿರತೆ ಬೆಕ್ಕುಗಳು ಹಾಗೂ ಪ್ರಾಣಿಗಳು ಸೇರಿದಂತೆ ವಿವಿಧ ಆಕಾರದ ಪಟಗಳು ಆಕಾಶದಲ್ಲಿ ಹಾರಾಡಿದವು.
ಕೊಪ್ಪಳ ಅಥ್ಲೆಟಿಕ್ ಅಸೋಸಿಯೇಷನ್ ಆಶ್ರಯದಲ್ಲಿ ಗವಿಮಠ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಳ್ಳಲಾಗಿರುವ ಈ ಗಾಳಿಪಟ ಮಹೋತ್ಸವ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ದೇಶದ ಯಾವುದೋ ಮೂಲೆಯಲ್ಲಿ ನೆಲೆಸಿದ್ದ ಗಾಳಿಪಟ ಉತ್ಸವಗಳು ಇಂದು ಕೊಪ್ಪಳದಲ್ಲಿ ನಡೆಯುತ್ತಿರುವುದು ಕಂಡು ಭಕ್ತರು ಹಾಗೂ ನೆರೆದ ಸಾರ್ವಜನಿಕರು ಹರ್ಷವನ್ನು ವ್ಯಕ್ತಪಡಿಸಿದರು.
ಚಳಿಗಾಲ ಮಾತ್ರವಲ್ಲ, ಬೇಸಿಗೆಯಲ್ಲೂ ಹಿಮ್ಮಡಿ ಒಡೆಯುತ್ತಾ..? ಕಾರಣವೇನು..? ಪರಿಹಾರಗಳು ಇಲ್ಲಿದೆ ನೋಡಿ
ಸದಾ ಹೊಸತನ್ನೇ ಯೋಚಿಸುವ ಆಯೋಜಕರು ಈ ಸಲ ಗಾಳಿಪಟದ ಉತ್ಸವವನ್ನು ಆಯೋಜನೆ ಮಾಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಈ ಗಾಳಿಪಟ ಉತ್ಸವದಲ್ಲಿ ಗುಜರಾತ್ ಓಡಿಸ್ಸಾ ಕೇರಳ ದೊಡ್ಡಬಳ್ಳಾಪುರ ಸೇರಿದಂತೆ ಸ್ಪರ್ಧಾರ್ಥಿಗಳು ಆಗಮಿಸಿದ್ದಾರೆ.