ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋಗೆ ಗೌತಮಿ ಜಾದವ್ ಅವರ ಪತಿ ಅಭಿಷೇಕ್ ಕಾಸರಗೋಡು ಬಂದಿದ್ದಾರೆ. ಬಿಗ್ ಬಾಸ್ ಮನೆಯ ಒಳಗೆ ಅವರು ವಿವಾಹ ವಾರ್ಷಿಕೋತ್ಸವ ಆಚರಿಸಿದ್ದಾರೆ. ಈ ಖುಷಿಯ ಕ್ಷಣದಲ್ಲಿ ದೊಡ್ಮನೆ ಸದಸ್ಯರು ಭಾಗಿ ಆಗಿದ್ದಾರೆ.
ಗುರುವಾರ ಬಿಗ್ಬಾಸ್ ಮನೆಗೆ ಗೌತಮಿ ಜಾಧವ್ ಪತಿಯ ಆಗಮನವಾಗಿದೆ. ಪತಿಯನ್ನು ನೋಡಿದ ಕೂಡಲೇ ಗೌತಮಿ ಜಾಧವ್ ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ.
93 ದಿನಗಳ ಕಾಲ ಬಿಗ್ಬಾಸ್ ಮನೆಯಲ್ಲಿದ್ದ ಗೌತಮಿ ಜಾಧವ್ ಮುಖದಲ್ಲಿ ಮಂದಹಾಸ ಮೂಡಿದೆ. ಇಷ್ಟು ದಿನ ಕುಟುಂಬಸ್ಥರನ್ನು ಬಿಟ್ಟು ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದ ಗೌತಮಿ ಈಗ ಸಖತ್ ಹ್ಯಾಪಿಯಾಗಿದ್ದಾರೆ.
ಅದರಲ್ಲೂ ಗೌತಮಿ ಜಾಧವ್ ಅವರ ವಿವಾಹ ವಾರ್ಷಿಕೋತ್ಸವ ಇತ್ತು. ಹೀಗಾಗಿ ವಿವಾಹ ವಾರ್ಷಿಕೋತ್ಸವದ ದಿನವೇ ಬಿಗ್ಗಾಸ್ ಗೌತಮಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಅಲ್ಲದೇ ಪತಿಯಿಂದಲೂ ಗೌತಮಿ ಅವರಿಗೆ ಸರ್ಪ್ರೈಸ್ ಗಿಫ್ಟ್ ಸಿಕ್ಕಿದೆ.