ತಮ್ಮ ನೆಚ್ಚಿನ ಬೌಲಿಂಗ್ ಕೋಚ್ ಆಯ್ಕೆ ವಿಚಾರದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜೊತೆಗೆ ಗೌತಮ್ ಗಂಭೀರ್ ಗುದ್ದಾಟ ಮುಂದುವರಿದಿದೆ. ಅಷ್ಟೇ ಅಲ್ಲದೆ ಗೌತಮ್ ಗಂಭೀರ್ ಸೂಚಿಸಿದ ಮತ್ತೊಂದು ಹೆಸರನ್ನು ಬಿಸಿಸಿಐ ನಿರಾಕರಿಸಿದೆ
ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ಕೆಲಸ ಮಾಡಿದ್ದ ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ 38 ವರ್ಷದ ಮೊರ್ನೆ ಮಾರ್ಕೆಲ್ ಅವರನ್ನು ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಸ್ಥಾನಕ್ಕೆ ಪರಿಗಣಿಸುವಂತೆ ಗೌತಮ್ ಗಂಭೀರ್, ಬಿಸಿಸಿಐ ಎದುರು ಮನವಿ ಇಟ್ಟಿದ್ದರು. ಆದರೆ ಕ್ರಿಕೆಟ್ ಮಂಡಳಿ ಅವರ ಈ ಬೇಡಿಕೆಯನ್ನೂ ನಿರಾಕರಿಸಿದೆ ಎನ್ನಲಾಗಿದೆ.
BREAKING NEWS: ಪಂಚೆ ಧರಿಸಿದ್ದ ರೈತನಿಗೆ ಅವಮಾನ: 7 ದಿನ GT ಮಾಲ್ ಕ್ಲೋಸ್!
ಬೌಲಿಂಗ್ ಕೋಚ್ ಸ್ಥಾನಕ್ಕೆ ಕರ್ನಾಟಕದ ಮಾಜಿ ನಾಯಕ ಆರ್ ವಿನಯ್ ಕುಮಾರ್ ಮತ್ತು ತಮಿಳುನಾಡಿನ ಮಾಜಿ ವೇಗಿ ಲಕ್ಷ್ಮೀಪತಿ ಬಾಲಾಜಿ ಅವರನ್ನು ಮೊದಲ ಎರಡು ಆಯ್ಕೆಯಾಗಿ ಗಂಭೀರ್ ಬಿಸಿಸಿಐ ಮುಂದೆ ಪ್ರಸ್ತಾಪ ಮಾಡಿದ್ದರು. ಇದಕ್ಕೆ ಬಿಸಿಸಿಐ ಸಮ್ಮತಿಸದೇ ಇದ್ದ ಕಾರಣಕ್ಕೆ ದಕ್ಷಿಣ ಆಫ್ರಿಕಾದ ಮೊರ್ನೆ ಮಾರ್ಕೆಲ್ ಅವರನ್ನು ನೀಡುವಂತೆ ಕೇಳಿದ್ದರು. ಆದರೆ, ಬಿಸಿಸಿಐ ಯಾವುದಕ್ಕೂ ಕವಡೆ ಕಿಮ್ಮತ್ತು ಕೊಟ್ಟಂತ್ತಿಲ್ಲ. ಇದಕ್ಕೂ ಮುನ್ನ ಫೀಲ್ಡಿಂಗ್ ಕೋಚ್ ಸ್ಥಾನಕ್ಕೆ ದಕ್ಷಿಣ ಆಫ್ರಿಕಾದ ದಿಗ್ಗಜ ಜಾಂಟಿ ರೋಡ್ಸ್ ಮತ್ತು ಬ್ಯಾಟಿಂಗ್ ಕೋಚ್ ಸ್ಥಾನಕ್ಕೆ ನೆದರ್ಲೆಂಡ್ಸ್ನ ರಯಾನ್ ಟೆನ್ ಡೆಷ್ಕಾಟೆ ಅವರನ್ನು ನೀಡುವಂತೆ ಕೇಳಿದ್ದರು. ಈ ಎಲ್ಲಾ ಬೇಡಿಕೆಗಳನ್ನು ನಿರಾಕರಿಸಿರುವ ಬಿಸಿಸಿಐ ದೇಶಿಯ ಕೋಚ್ಗಳಿಗೆ ಆದ್ಯತೆ ನೀಡುವಂತೆ ಸೂಚನೆ ನೀಡಿದೆ