ಟೀಮ್ ಇಂಡಿಯಾ ಕೋಚ್ ಆಗಿ ಗಂಭೀರ್ ಅವರನ್ನು ನೇಮಕ ಮಾಡುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ.
ಬಿಸಿಸಿಐ ತಮ್ಮನ್ನು ಮಾಜಿ ಭಾರತೀಯ ಗಂಭೀರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡುವುದಕ್ಕೆ ಐಪಿಎಲ್ ಫೈನಲ್ನ ಮುಗಿಯುವುದಕ್ಕಾಗಿ ಕಾಯುತ್ತಿದ್ದರಂತೆ. ಆದರೆ ಇದೀಗ ಐಪಿಎಲ್ ಮುಕ್ತಾಯವಾಗಿದ್ದು ಇನ್ನೇನು ಗಂಭೀರ್ ಅವರ ಹೆಸರನ್ನು ಪ್ರಕಟಿಸಲಾಗುವುದು ಎಂದು ಬಿಸಿಸಿಐ ಉನ್ನತ ಅಧಿಕಾರಿಗಳಿಗೆ ನಿಕಟವಾಗಿರುವ ಐಪಿಎಲ್ ಫ್ರಾಂಚೈಸಿಯ ಉನ್ನತ ಮಟ್ಟದ ಅಧಿಕಾರಿಗಳು ವೆಬ್ಸೈಟ್ಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಗೌತಮ್ ಗಂಭೀರ್ ಅವರು ಭಾರತ ತಂಡದ ಮುಖ್ಯ ಕೋಚ್ ಆಗಲು ಬಯಸುತ್ತಾರೆಯೇ ಎಂದು ಭಾರತೀಯ ಮಂಡಳಿಯು ಅವರಿಂದ ತಿಳಿಯಲು ಬಯಸುತ್ತಿದೆ. ಸದ್ಯ ಟೀಂ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರಾವಧಿ ಮುಂಬರುವ ಟಿ20 ವಿಶ್ವಕಪ್ ವರೆಗೆ ಇದೆ. ಬಿಸಿಸಿಐ ಇತ್ತೀಚೆಗೆ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ
ಆಸಕ್ತ ಮಾಜಿ ಆಟಗಾರರು ಮೇ 27 ರೊಳಗೆ ಅರ್ಜಿ ಸಲ್ಲಿಸಬಹುದಾಗಿತ್ತು. ಇದೀಗ ಈ ಅವದಿಯೂ ಮುಕ್ತಾಯವಾಗಿದೆ. ಇದಕ್ಕಾಗಿ ಬಿಸಿಸಿಐ ಮಾಜಿ ಆಟಗಾರ ಗೌತಮ್ ಗಂಭೀರ್ ಅವರನ್ನೂ ಸಹ ಅಪ್ರೋಚ್ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಇದೀಗ ಗಂಭೀರ್ ಅವರು ಆಯ್ಕೆ ಬಹುತೇಕ ಖಚಿತವಾಗಿದೆ ಎಂದು ಹೇಳಲಾಗುತ್ತಿದೆ.
ಹೀಗಾಗಿ ಗೌತಮ್ ಗಂಭೀರ್ ಹೆಡ್ ಕೋಚ್ ಆದರೆ ಭಾರತೀಯ ಕ್ರಿಕೆಟ್ನಲ್ಲಿ ಹೊಸ ಅಲೆ ಆರಂಭವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಇದರ ಬಗ್ಗೆ ಯಾವುದೇ ಸ್ಪಷ್ಟತೆ ದೊರಕಿಲ್ಲ. ಗಂಭೀರ್ ಪ್ರಸ್ತುತ ಐಪಿಎಲ್ ಫ್ರಾಂಚೈಸಿ ಕೋಲ್ಕತ್ತಾ ನೈಟ್ ರೈಡರ್ಸ್ನ ಮೆಂಟರ್ ಆಗಿದ್ದಾರೆ. ಐಪಿಎಲ್ 2024ರ ಅಂತ್ಯದ ನಂತರ ಬಿಸಿಸಿಐ ಮತ್ತು ಗಂಭೀರ್ ನಡುವೆ ಹೆಚ್ಚಿನ ಚರ್ಚೆಗಳನ್ನು ನಿರೀಕ್ಷಿಸಲಾಗಿದೆ.
ರಾಹುಲ್ ದ್ರಾವಿಡ್ ತಮ್ಮ ಅಧಿಕಾರಾವಧಿಯನ್ನು ವಿಸ್ತರಿಸಲು ಬಯಸಿಲ್ಲ ಎಂದು ತಿಳಿದುಬಂದಿದೆ . ಅವರು ತಮ್ಮ ನಿರ್ಧಾರವನ್ನು ಬಿಸಿಸಿಐಗೆ ಈಗಾಗಲೇ ತಿಳಿಸಿದ್ದಾರೆ ಎನ್ನಲಾಗಿದೆ. 42 ವರ್ಷದ ಗೌತಮ್ ಗಂಭೀರ್ಗೆ ಅಂತರಾಷ್ಟ್ರೀಯ ಅಥವಾ ದೇಶೀಯ ಮಟ್ಟದಲ್ಲಿ ತರಬೇತಿ ನೀಡಿದ ಅನುಭವವಿಲ್ಲ. ಅವರು ಎರಡು ಐಪಿಎಲ್ ಫ್ರಾಂಚೈಸಿಗಳಲ್ಲಿ ಕೋಚಿಂಗ್ ಇನ್ ಚಾರ್ಜ್ ಆಗಿ ಸೇವೆ ಸಲ್ಲಿಸಿದ್ದಾರೆ.
ಮಾಜಿ ಎಡಗೈ ಓಪನರ್ ಗೌತಮ್ ಗಂಭೀರ್ 2022 ಮತ್ತು 2023ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ನ ಮಾರ್ಗದರ್ಶಕರಾಗಿದ್ದರು ಮತ್ತು ಅವರು 2024ರಲ್ಲಿ ಕೆಕೆಆರ್ನ ಮೆಂಟರ್ ಆಗಿದ್ದರು. ಅಲ್ಲದೇ ಕೆಕೆಆರ್ ಮೆಂಟರ್ ಆದ ಮೊದಲ ವರ್ಷವೇ ಗಂಭೀರ್ ಅವರು ಕೆಕೆಆರ್ ತಂಡವನ್ನು ಚಾಂಪಿಯನ್ ಮಾಡಿದರು.
ಇನ್ನು, ಗಂಭೀರ್ ವಿಷಯದಲ್ಲಿ ದೈನಿಕ್ ಜಾಗರಣ್ನಲ್ಲಿ ಪ್ರಕಟವಾದ ವರದಿ ಕ್ರಿಕೆಟ್ ವಲಯದಲ್ಲಿ ಚರ್ಚೆಗೀಡುಮಾಡಿತ್ತು. ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಬಿಸಿಸಿಐ ಈಗಾಗಲೇ ಗಂಭೀರ್ ಅವರನ್ನು ಸಂಪರ್ಕಿಸಿದೆ ಎಂದು ಈ ವರದಿ ಬಹಿರಂಗಪಡಿಸಿತ್ತು . ಅವರೂ ಕೂಡ ಈ ಸ್ಥಾನಕ್ಕೆ ಆಸಕ್ತಿ ತೋರಿದ್ದಾರೆ ಎನ್ನಲಾಗಿತ್ತು. ಗಂಭೀರ್ ಐಪಿಎಲ್ 2024ರ ಫೈನಲ್ ಬಳಿಕ ಈ ವಗ್ಗೆ ಚರ್ಚಿಸುವ ಸಾಧ್ಯತೆಗಳಿದ್ದವು ಮತ್ತು ಇದೀಗ ಬಹುತೇಕ ಖಚಿತ ಎನ್ನಲಾಗುತ್ತಿದೆ.