ಮಂಡ್ಯ:- ಕೇಂದ್ರ ಸಚಿವ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಪಂಚೆ ಎತ್ತಿ ಕಟ್ಟಿ ನಾಟಿ ಮಾಡಿದ್ದಾರೆ.
ಬ್ಯಾಗ್ ಚೆಕಿಂಗ್ ವೇಳೆ ಬಾಂಬ್ ಇದೆ ಎಂದು ತಮಾಷೆ: ಏರ್ಪೋರ್ಟ್ ನಲ್ಲಿ ವ್ಯಕ್ತಿ ಬಂಧಿಸಿದ ಪೊಲೀಸ್!
ರೈತ ಮಹಿಳೆಯರ ನೆಟ್ಟಿಯ ಪದಗಳ ಹಿನ್ನೆಲೆ ಇದ್ರೆ, ರೈತರು ಕುಮಾರಸ್ವಾಮಿಗೆ ಸಾಥ್ ಕೊಟ್ರು. ಹೌದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಗದ್ದೆಯಲ್ಲಿ ಹೆಚ್ಡಿ ಕುಮಾರಸ್ವಾಮಿ ಭತ್ತದ ನಾಟಿ ಮಾಡಿದ್ದಾರೆ.
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಇಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದ ಗದ್ದೆಯೊಂದಲ್ಲಿ ನಾಟಿ ಮಾಡಿದ್ರು. ರಾಶಿ ಪೂಜೆ ಸಲ್ಲಿಸಿದ ಹೆಚ್ಡಿಕೆ ಬಳಿಕ ಗದ್ದೆಗಿಳಿದು ಬತ್ತ ನಾಟಿ ಮಾಡಿದ್ರು. ನಾಟಿಗೂ ಮುನ್ನ ಜಮೀನಿನ ಬಳಿ ರಾಶಿ ಪೂಜೆ ಮಾಡಿ, ರಾಶಿ ಪೂಜೆ ಬಳಿಕ ಗದ್ದೆಗೆ ಇಳಿದ್ರು. ಭತ್ತದ ನಾಟಿ ವೇಳೆ ಪ್ರೋತ್ಸಾಹಕ್ಕೆ ರೈತ ಮಹಿಳೆಯರು ಹಿಮ್ಮೇಳದಲ್ಲಿ ಸೋಬಾನೆ ಪದ ಹೇಳಿದ್ರು.
ನಾಟಿ ಮಾಡುವ ಮಹಿಳೆಯರ ಜೊತೆಗೂಡಿ ಹೆಚ್ಡಿ ಕುಮಾರಸ್ವಾಮಿ ನಾಟಿ ಮಾಡಿದ್ರು. ಹೆಚ್ಡಿಕೆಗೆ ಪುತ್ರ ನಿಖಿಲ್ ಸೇರಿ ಹಲವು ಜೆಡಿಎಸ್ ನಾಯಕರು, ಗ್ರಾಮಸ್ಥರು ಸಾಥ್ ನೀಡಿದ್ರು.
ಭತ್ತ ನಾಟಿ ಮಾಡಿದ ಬಳಿಕ ಮಾತನಾಡಿದ ಹೆಚ್ಡಿ ಕುಮಾರಸ್ವಾಮಿ, ಕೊಂಚ ಭಾವುಕರಾದ್ರು. ನಮ್ಮ ರೈತರು ಅತ್ಯಂತ ಸ್ವಾಭಿಮಾನಿಗಳು, ಸತ್ಯವಂತರು. ಚಿಕ್ಕವನಾಗಿಂದ ನೋಡಿದ್ದೇನೆ ಕೃಷಿ ನಂಬಿ ಬದುಕುವವರು ಮುಗ್ದರು ಅಂತ ಹೇಳಿದ್ರು.
ಹಿಂದೆ ಹಳ್ಳಿಗಳಲ್ಲಿ ಭಾಂದವ್ಯ ತುಂಬಿತ್ತು. ಈಗ ಇಂತ ಒಗ್ಗಟ್ಟು ಮರೆಯಾಗಿದೆ. ಇಂದು ನಾನು ಮಾಡಿದ ನಾಟಿ ಕಾರ್ಯ ನನ್ನ ಜೀವನದ ಸುವರ್ಣಾಕ್ಷರಗಳು ಅನ್ನೋದು ನನ್ನ ಅಭಿಪ್ರಾಯ ಅಂತ ಹೇಳಿದರು.