ಬೆಳ್ಳುಳ್ಳಿ ಅಗಿಯಬೇಕೋ-ನುಂಗಬೇಕೋ? ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೆಯದು ಎಂದು ತಿಳಿಯಲು ಈ ಲೇಖನ ಪೂರ್ತಿ ಓದಿ..
ಬೆಳ್ಳುಳ್ಳಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಉತ್ತಮ ಆಹಾರವಾಗಿದೆ. ಬೆಳ್ಳುಳ್ಳಿ ಹೃದಯದ ಆರೋಗ್ಯಕ್ಕೆ (Heart Health) ಮಾತ್ರವಲ್ಲದೇ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಇದನ್ನು ಅಡುಗೆಯಲ್ಲಿ ವ್ಯಾಪಕವಾಗಿ ಬಳಸಲಾಗಿದ್ದರೂ, ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದರಿಂದ ದೇಹಕ್ಕೆ ಕೆಲವು ಅದ್ಭುತ ಪ್ರಯೋಜನಗಳಿವೆ. ನೀವು ಈ ಪ್ರಯೋಜನಗಳನ್ನು ಪಡೆಯಬೇಕೆಂದರೆ ಬೆಳ್ಳುಳ್ಳಿಯನ್ನು ನುಂಗಬೇಕೋ ಅಥವಾ ಅಗಿಯಬೇಕೋ ಎಂಬುವುದನ್ನು ಮೊದಲು ತಿಳಿದುಕೊಳ್ಳಿ.
ಹೇಗಿದ್ದ ಪವಿತ್ರಾ ಗೌಡ ಹೀಗಾದರು ನೋಡಿ: ಅಚ್ಚರಿ ಮೂಡಿಸುತ್ತೆ ಪವಿತ್ರಾ ಬದಲಾದ ರೀತಿ
ಬೆಳ್ಳುಳ್ಳಿಯ ಆರೋಗ್ಯ ಪ್ರಯೋಜನಗಳು: ಬೆಳ್ಳುಳ್ಳಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ನೀವು ಹಸಿ ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆಯಲ್ಲಿಯೂ ತಿನ್ನಬಹುದು ಅಥವಾ ವಿವಿಧ ರೀತಿಯಲ್ಲಿ ಆಹಾರದಲ್ಲಿ ಸೇರಿಸಿಕೊಳ್ಳಬಹುದು.
ಕೆಮ್ಮು ಅಥವಾ ಶೀತ: ಹಸಿ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಕೆಮ್ಮು ಅಥವಾ ನೆಗಡಿಯಂತಹ ಸೋಂಕನ್ನು ತಡೆಯಬಹುದು. ಎರಡು ಎಸಳು ಬೆಳ್ಳುಳ್ಳಿಯನ್ನು ರುಬ್ಬಿಕೊಂಡು ಖಾಲಿ ಹೊಟ್ಟೆಯಲ್ಲಿ ತಿನ್ನುವ ಮೂಲಕ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಬೆಳ್ಳುಳ್ಳಿಯ ಬಲವಾದ ವಾಸನೆಯು ಮಕ್ಕಳಲ್ಲಿ ಸೋಂಕುಗಳು ಅಥವಾ ಅಲರ್ಜಿಯನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ಬೆಳ್ಳುಳ್ಳಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಶೀತ ಮತ್ತು ಜ್ವರದಂತಹ ಸಾಮಾನ್ಯ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಪೌಷ್ಟಿಕತಜ್ಞ ಅವ್ನಿ ಕೌಲ್ ಹೇಳುತ್ತಾರೆ.
ಹೃದಯದ ಆರೋಗ್ಯ: ಬೆಳ್ಳುಳ್ಳಿ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದಲ್ಲದೇ, ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಬೆಳ್ಳುಳ್ಳಿಯ ನಿಯಮಿತ ಸೇವನೆಯು ರಕ್ತ ಹೆಪ್ಪುಗಟ್ಟುವಿಕೆಯ ರಚನೆಯನ್ನು ತಡೆಯುತ್ತದೆ. ಅಧಿಕ ರಕ್ತದೊತ್ತಡ ರೋಗಿಗಳಿಗೆ ಬೆಳ್ಳುಳ್ಳಿ ಅತ್ಯುತ್ತಮ ಆಹಾರವಾಗಿದೆ. ಏಕೆಂದರೆ ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ಉರಿಯೂತದ ಗುಣಲಕ್ಷಣಗಳು: ಬೆಳ್ಳುಳ್ಳಿಯ ಉರಿಯೂತದ ಗುಣಲಕ್ಷಣಗಳು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಸಂಧಿವಾತದಂತಹ ಸಮಸ್ಯೆಗಳನ್ನು ನಿವಾರಣೆಗೆ ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಜೀರ್ಣಕಾರಿ ಸಮಸ್ಯೆಯಿಂದ ಬಳಲುತ್ತಿರುವವರು ಹಸಿ ಬೆಳ್ಳುಳ್ಳಿಯನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಅವುಗಳಿಂದ ಪರಿಹಾರ ಪಡೆಯಬಹುದು. ಇದು ಕರುಳಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಕರುಳಿನಲ್ಲಿರುವ ಹುಳುಗಳನ್ನು ತೆಗೆದುಹಾಕುತ್ತದೆ. ಹಾಗಾಗಿ ಬೆಳ್ಳುಳ್ಳಿ ಕರುಳಿನ ಆರೋಗ್ಯಕ್ಕೆ ಉತ್ತಮವಾಗಿದೆ. ಬ್ಯಾಕ್ಟೀರಿಯಾದ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಕೆಟ್ಟ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ.
ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು: ಬೆಳ್ಳುಳ್ಳಿಯು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ, ಇದು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಬೆಳ್ಳುಳ್ಳಿ ದೇಹದಲ್ಲಿ ಫ್ರೀ ರಾಡಿಕಲ್ ಮತ್ತು ಡಿಎನ್ಎ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿರುವ ಸತುವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ವಿಟಮಿನ್ ಸಿ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ. ಮುಖ್ಯವಾಗಿ ಇದರ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಕಣ್ಣು ಮತ್ತು ಕಿವಿ ಸೋಂಕುಗಳ ವಿರುದ್ಧ ಹೋರಾಡುತ್ತವೆ
ಬೆಳ್ಳುಳ್ಳಿಯನ್ನು ತಿನ್ನಲು ಉತ್ತಮ ಮಾರ್ಗ ಯಾವುದು?
ಬೆಳ್ಳುಳ್ಳಿಯನ್ನು ಪೇಸ್ಟ್ ಮಾಡಿ ಅಥವಾ ಚಿಕ್ಕ ಪೀಸ್ಗಳಾಗಿ ಕತ್ತರಿಸಿ, ಇಲ್ಲದಿದ್ದರೆ 10 ನಿಮಿಷಗಳ ಕಾಲ ಜಗಿದು ಕಚ್ಚಾ ತಿನ್ನುವುದು ಉತ್ತಮ ಆಯ್ಕೆಯಾಗಿದೆ.
ಹಸಿ ಬೆಳ್ಳುಳ್ಳಿ ಸೇವನೆಯು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಬೇಯಿಸಿ ತಿನ್ನಬಹುದು.
ಬೆಳ್ಳುಳ್ಳಿ ಉರಿಯೂತದ ಮತ್ತು ಹೃದಯರಕ್ತನಾಳದ ಪ್ರಯೋಜನಗಳನ್ನು ಹೆಚ್ಚಿಸುತ್ತದೆ.
ಬೆಳ್ಳುಳ್ಳಿ ಅಗಿಯಬೇಕೋ ಅಥವಾ ನುಂಗಬೇಕೋ?
ಬೆಳ್ಳುಳ್ಳಿಯನ್ನು ಜಗಿಯುವುದರಿಂದ ಆಲಿಸಿನ್ ನಂತಹ ಪ್ರಯೋಜನಕಾರಿ ಸಂಯುಕ್ತಗಳು ಬಿಡುಗಡೆಯಾಗುತ್ತವೆ, ಇದು ಆಂಟಿಮೈಕ್ರೊಬಿಯಲ್ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಬೆಳ್ಳುಳ್ಳಿಯ ರುಚಿ ಮತ್ತು ಪರಿಮಳವನ್ನು ಕೂಡ ಹೆಚ್ಚಿಸುತ್ತದೆ. ಹಾಗಾಗಿ ಗರಿಷ್ಠ ಆರೋಗ್ಯ ಪ್ರಯೋಜನಗಳನ್ನು ಪಡೆಯಲು ಬೆಳ್ಳುಳ್ಳಿಯನ್ನು ಅಗಿಯುವುದು ಉತ್ತಮ.
ಲಿಪಿಡ್ಸ್ ಇನ್ ಹೆಲ್ತ್ ಅಂಡ್ ಡಿಸೀಸ್ ಜರ್ನಲ್ನಲ್ಲಿ ಪ್ರಕಟವಾದ 2005 ರ ಅಧ್ಯಯನದಿಂದ ಇದು ದೃಢೀಕರಿಸಲ್ಪಟ್ಟಿದೆ. ಅಧ್ಯಯನದ ಪ್ರಕಾರ, ನುಂಗುವ ಬೆಳ್ಳುಳ್ಳಿ ಸೀರಮ್ ಲಿಪಿಡ್ ಮಟ್ಟವನ್ನು ಕಡಿಮೆ ಮಾಡುವುದಿಲ್ಲ. ಆದರೆ ಪೇಸ್ಟ್ ಮಾಡಿದ ಬೆಳ್ಳುಳ್ಳಿ ಅಥವಾ ಅಗಿದ ಬೆಳ್ಳುಳ್ಳಿ ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ