ಬೆಂಗಳೂರು:- ಬೆಳ್ಳುಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡಿರುವುದು ಅಚ್ಚರಿ ಮೂಡಿಸಿದೆ. ಬೆಳ್ಳುಳ್ಳಿ ಬೆಲೆ ಕೆಜಿಗೆ 350 ರೂಪಾಯಿಯಿಂದ 400 ರೂಪಾಯಿ ಆಗಿದೆ. ಬೆಳ್ಳುಳ್ಳಿ, ಈರುಳ್ಳಿ ಸೇರಿದಂತೆ ತರಕಾರಿ ಬೆಲೆಗಳು ಹೆಚ್ಚಳವಾಗುತ್ತಿರುವುದು ಗ್ರಾಹಕರಿಗೆ ಕಣ್ಣೀರು ತರಿಸುತ್ತಿವೆ.
Boys Vs Girls: ಈ ಮೂವರಿಗೆ ಸಿಕ್ತು ಭರ್ಜರಿ ಆಫರ್: ಹೊಸ ಶೋಗೆ ಎಂಟ್ರಿ!
ಮಾರುಕಟ್ಟೆಗಳಲ್ಲಿ ಬೆಳ್ಳುಳ್ಳಿ ಒಂದು ಕೆಜಿಗೆ 400 ರೂಪಾಯಿಗಳನ್ನು ತಲುಪಿದೆ. ತಿಂಗಳ ಹಿಂದೆಯಷ್ಟೇ 350 ರೂಪಾಯಿ ಇದ್ದ ಬೆಳ್ಳುಳ್ಳಿ ದರ ಈಗ ಮತ್ತಷ್ಟು ಏರಿಕೆ ಕಂಡಿರುವುದು ಗ್ರಾಹಕರಿಗೆ ಬೇಸರ ತರಿಸಿದೆ. ಕಳೆದ ಕೆಲವು ತಿಂಗಳುಗಳಿಂದ ಬೆಳ್ಳುಳ್ಳಿ ಬೆಲೆಯಲ್ಲಿ ಏರಿಕೆ ಆಗುತ್ತಲಿದೆ. ಆದರೆ ಈಗ ಭಾರೀ ಅಂತರದಲ್ಲಿ ಬೆಳ್ಳುಳ್ಳಿ ರೇಟ್ ಹೆಚ್ಚಾಗಿರುವುದಕ್ಕೆ ಜನರು ಆತಂಕ ವ್ಯಕ್ತಪಡಿಸಿದ್ದಾರೆ.
ಕಳೆದ ವಾರದಲ್ಲಿ ಬೆಳ್ಳುಳ್ಳಿ ಬೆಲೆ 350 ರೂಪಾಯಿ ಇತ್ತು. ಆದರೆ ಒಂದೇ ವಾರದಲ್ಲಿ 50 ರೂಪಾಯಿ ಹೆಚ್ಚಳವಾಗಿದ್ದರಿಂದ ಪ್ರಸ್ತುತ ಇದರ ದರ 400 ರೂಪಾಯಿ ಆಗಿದೆ. ಬೆಳ್ಳುಳ್ಳಿ ಬೆಲೆ ಏರಿಕೆಗೆ ಪ್ರಮುಖ ಕಾರಣ ರಾಜ್ಯದಲ್ಲಿ ಬೆಳೆ ಇಲ್ಲದಿರುವುದು ಆಗಿದೆ. ಹೆಚ್ಚಿನ ರೈತರು ಬೆಳ್ಳುಳ್ಳಿ ಬೆಳೆ ಬೆಳೆದಿಲ್ಲ. ಇದರ ಜೊತೆ ಮಳೆಗಾಲದ ಸಮಯದಲ್ಲಿ ಕೆಲವು ರೈತರ ಬೆಳೆ ನಾಶವಾಗಿದ್ದು ಇದಕ್ಕೆ ಕಾರಣ ಎನ್ನಬಹುದು.