ಆನೇಕಲ್:- ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಯಳೇನಹಳ್ಳಿ ಕೆರೆಯಲ್ಲಿ ಗಂಗಾರತಿ ನಡೆದಿದೆ.
ಭಾವಿ ಪತ್ನಿ ಜೊತೆ ಸಿಎಂ ಭೇಟಿ ಮಾಡಿದ ಡಾಲಿ ಧನಂಜಯ್: ಲಗ್ನ ಪತ್ರಿಕೆ ನೀಡಿ ಮದುವೆಗೆ ಆಹ್ವಾನಿಸಿದ ಜೋಡಿ
ಸುತ್ತಮುತ್ತಲಿನ ಬಡಾವಣೆ ವಾಸಿಗಳಿಂದ ಗಂಗಾರತಿ ನಡೆದಿದೆ. ಕಳೆದ ಮೂರು ವರ್ಷಗಳಿಂದ ಆಚರಣೆ ಮಾಡಲಾಗುತ್ತಿದ್ದು, ದೀಪಗಳನ್ನು ಹಚ್ಚಿ ರಂಗೋಲಿ ಹಾಕಿ ಕೆರೆಗೆ ಸಿಂಗಾರ ಮಾಡಲಾಗಿದೆ. ಮಹಿಳೆಯರು ಮಕ್ಕಳು ಕುಟುಂಬದೊಂದಿಗೆ ಭಾಗಿಯಾಗಿದ್ದಾರೆ. ಕೆರೆಗಳ ಸಂರಕ್ಷಣೆ ಜೊತೆ ಜಲ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
ಗಂಗಾರತಿ ಮೂಲಕ ಕೆರೆ ಮತ್ತು ಜಲ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಬೆಂಗಳೂರು ದಕ್ಷಿಣ ಶಾಸಕ ಎಂ ಕೃಷ್ಣಪ್ಪ ಚಾಲನೆ ಕೊಟ್ಟಿದ್ದಾರೆ.