ಕೊಡಗು:-ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಕುಟ್ಟ ಸಮೀಪದ ಕಾಫಿ ತೋಟದಲ್ಲಿ ಡ್ರಾಪ್ ಕೇಳಿದ ಬಾಲಕಿ ಮೇಲೆ ಗ್ಯಾಂಗ್ ರೇಪ್ ನಡೆದ ಘಟನೆ ಜರುಗಿದೆ.
ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಗೆ KSRTC ಬಸ್ ಡಿಕ್ಕಿ, ಸ್ಥಳದಲ್ಲೇ ಸಾವು!
ನಿನ್ನೆ ಘಟನೆ ಜರುಗಿದ್ದು, ಮತ್ತೋರ್ವ ಬಾಲಕಿ ಮೇಲೂ ಅತ್ಯಾಚಾರಕ್ಕೆ ಯತ್ನಿಸಲಾಗಿದೆ. ಸಂತ್ರಸ್ತ ಬಾಲಕಿಯರಿಂದ ಕುಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಘಟನಾಸ್ಥಳಕ್ಕೆ ಕೊಡಗು ಎಸ್ಪಿ ರಾಮರಾಜನ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಜೂನ್ 9 ರಂದು ಮೂವರು ಸ್ನೇತರ ಜೊತೆ ರಸ್ತೆಯಲ್ಲಿ ಬಾಲಕಿಯರು ನಡೆದು ಸಾಗುತ್ತಿದ್ದರು. ಈ ವೇಳೆ ದಾರಿಯಲ್ಲಿ ಬಂದ ಅಪರಿಚಿತ ಕಾರನ್ನು ಐವರು ಹತ್ತಿದ್ದಾರೆ. ನಾಗರಹೊಳೆಗೆ ಡ್ರಾಪ್ ನೀಡುವಂತೆ ಬಾಲಕಿಯರಿಂದ ವಿನಂತಿ ಮಾಡಲಾಗಿದೆ.
ಮಾರುತಿ 800 ಕಾರಿನಲ್ಲಿ ನಾಗರಹೊಳೆ ಕಡೆ ಬಾಲಕಿಯರು ತೆರಳಿದ್ದು, ದಾರಿ ಮಧ್ಯೆ ಕಾಫಿ ತೋಟದಲ್ಲಿ ಓರ್ವ ಬಾಲಕಿ ಮೇಲೆ ನವೀಂದ್ರ, ಅಕ್ಷಯ್ ಎಂಬುವವರಿಂದಲೇ ಅತ್ಯಾಚಾರ ಮಾಡಲಾಗಿದೆ. ಮತ್ತೋರ್ವ ಬಾಲಕಿ ಮೇಲೆ ರಾಹುಲ್, ಮನು, ಸಂದೀಪ್ ಎಂಬುವವರಿಂದ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.