ಬೆಂಗಳೂರು : ಶಾಪಿಂಗ್ ಮಾಲ್ನ ಪಾರ್ಕಿಂಗ್ನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸೆಗಿದ್ದವರ ಪೈಕಿ ಮೂವರು ಪಾಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಉತ್ತರ ಪ್ರದೇಶದ ನೋಯ್ಡಾದ ಶಾಪಿಂಗ್ ಮಾಲ್ ಒಂದರ ಸಮೀಪ ಐವರು ದುಷ್ಕರ್ಮಿಗಳು 25 ವರ್ಷದ ಮಹಿಳೆ ಮೇಲೆ ಸಾಮೂಹಿಕ ದೌರ್ಜನ್ಯ ಎಸಗಿದ್ದರು. ರಾಜ್ಕುಮಾರ್, ಆಜಾದ್ ಮತ್ತು ವಿಕಾಸ್ ಬಂಧಿತ ಆರೋಪಿಗಳು.
DVS Vs BKH: ದೇಶದ ನಂಬರ್ ಒನ್ ಭಯೋತ್ಪಾದಕ ಬಿ.ಕೆ. ಹರಿಪ್ರಸಾದ್: ಸದಾನಂದಗೌಡ
ಕೆಲವು ತಿಂಗಳ ಹಿಂದೆಯೇ ಈ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆದರೆ, ಕೃತ್ಯ ಎಸಗಿದ ವ್ಯಕ್ತಿಗಳು ಪ್ರಭಾವಿಗಳಾಗಿದ್ದ ಕಾರಣ ಕೂಡಲೇ ಪೊಲೀಸರಿಗೆ ದೂರು ನೀಡಲು ಸಂತ್ರಸ್ತೆಗೆ ಸಾಧ್ಯವಾಗಿರಲಿಲ್ಲ. ಸ್ಥಳೀಯ ಪ್ರಭಾವಿ ವ್ಯಕ್ತಿ ಸೇರಿದಂತೆ ಇನ್ನುಳಿದ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅತ್ಯಾಚಾರ ಎಸಗಿದ ಪಾಪಿಗಳು ಸಂತ್ರಸ್ತೆಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಮತ್ತೆ ಮತ್ತೆ ಕಿರುಕುಳ ನೀಡಲು ಆರಂಭಿಸಿದ್ದರು. ಇದರಿಂದ ಬೇಸತ್ತು ಮಹಿಳೆ ಡಿಸೆಂಬರ್ 30ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಮೂವರನ್ನು ಬಂದಿಸಿದ್ದು, ಇನ್ನು ಇಬ್ಬರು ಆರೋಪಿಗಳಾದ ರವಿ ಮತ್ತು ಮೆಹ್ಮಿ ತಲೆ ಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.