ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ನೇಮಕವಾಗಿದ್ದಾರೆ. ಈ ಕುರಿತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾಹಿತಿ ಪ್ರಕಟಿಸಿದ್ದಾರೆ. ಟೀಮ್ ಇಂಡಿಯಾದಲ್ಲಿ ಎಡಗೈ ಓಪನಿಂಗ್ ಬ್ಯಾಟರ್ ಆಗಿದ್ದ ಗಂಭೀರ್, ಐಪಿಎಲ್ 2024ರ ಆವೃತ್ತಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿ ಕೆಲಸ ಮಾಡಿದ್ದಾರೆ.
ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ತಂಡ ಈ ಬಾರಿಯ ಐಪಿಎಲ್ ಟ್ರೋಫಿ ಗೆದ್ದಿದೆ. ಜಯ್ ಶಾ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ಗೌತಮ್ ಗಂಭೀರ್ ಬಗ್ಗೆ ಸಂಪೂರ್ಣ ವಿಶ್ವಾಸವಿದೆ ಎಂದಿರುವ ಶಾ, ಭಾರತ ಕ್ರಿಕೆಟ್ ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಅವರು ಸೂಕ್ತ ವ್ಯಕ್ತಿ ಎಂದು ಬರೆದುಕೊಂಡಿದ್ದಾರೆ.
ಚಾಂಪಿಯನ್ ಕೋಚ್ಗೆ ಡಿಮ್ಯಾಂಡ್: ತವರಿನ ತಂಡದ ಕೋಚ್ ಹುದ್ದೆಗೇರ್ತಾರಾ ರಾಹುಲ್ ದ್ರಾವಿಡ್??
ಗಂಭೀರ್ ಸಂಪಾದನೆ ಎಷ್ಟು..?
ಗೌತಮ್ ಗಂಭೀರ್ ವಿಶ್ವದ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು. ಅವರ ಒಟ್ಟು ಸಂಪತ್ತು ಸುಮಾರು 265 ಕೋಟಿ ರೂಪಾಯಿ. ಕ್ರಿಕೆಟ್ನಿಂದ ಮಾತ್ರವಲ್ಲದೇ ಬ್ರ್ಯಾಂಡ್ ಪ್ರಾಯೋಜಕತ್ವದಿಂದಲೂ ಹಣ ಗಳಿಸುತ್ತಾರೆ. ಅನೇಕ ವ್ಯವಹಾರಗಳಲ್ಲಿ ಹೂಡಿಕೆ ಕೂಡ ಮಾಡಿದ್ದು, ಅದರಿಂದಲೂ ಹಣ ಸಂಪಾದನೆ ಮಾಡ್ತಾರೆ. ಮಾಹಿತಿಗಳ ಪ್ರಕಾರ ಸಣ್ಣ ವ್ಯಾಪಾರಗಳು, ರೆಸ್ಟೋರೆಂಟ್ಗಳು ಮತ್ತು ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ಗಾಗಿ ಕಾಮೆಂಟರಿ ಮತ್ತು ಇತರೆ ಕ್ರಿಕೆಟ್ಗೆ ಸಂಬಂಧಿಸಿ ಮಾಡುವ ಕೆಲಸಕ್ಕಾಗಿ ಸುಮಾರು 1.5 ಕೋಟಿ ರೂಪಾಯಿ ಹಣ ಗಳಿಸುತ್ತಾರೆ ಎಂದು ಅಂದಾಜಿಸಲಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಪೂರ್ವ ದೆಹಲಿ ಕ್ಷೇತ್ರದಿಂದ ಗಂಭೀರ್ ಸಂಸದರಾಗಿ ಆಯ್ಕೆಯಾಗಿದ್ದರು. ಚುನಾವಣೆ ವೇಳೆ ಅವರು ತಮ್ಮ ಆಸ್ತಿ 12.4 ಕೋಟಿ ರೂಪಾಯಿ ಎಂದು ಘೋಷಣೆ ಮಾಡಿಕೊಂಡಿದ್ದರು.
ಗಂಭೀರ್ಗೆ ಕಾರುಗಳೆಂದರೆ ತುಂಬಾ ಇಷ್ಟ. ಆಡಿ ಕ್ಯೂ 5 (Audi Q5) ಮತ್ತು ಬಿಎಂಡಬ್ಲ್ಯು 530 ಡಿ (BMW 530D) ಕಾರುಗಳನ್ನ ಹೊಂದಿದ್ದಾರೆ. ಟೊಯೊಟಾ ಕೊರೊಲ್ಲಾ (Toyota Corolla) ಮತ್ತು ಮಹೀಂದ್ರ ಬೊಲೆರೊ ಸ್ಟಿಂಗರ್ (Toyota Corolla) ಕಾರುಗಳು ಕೂಡ ಅವರ ಬಳಿ ಇವೆ. ಮಾತ್ರವಲ್ಲ, Mercedes GLS 350D, Maruti Suzuki SX4 ಕೂಡ ಇದೆ.
ದೆಹಲಿಯ ರಾಜಿಂದರ್ ನಗರದಲ್ಲಿ ಗಂಭೀರ್ ಐಷಾರಾಮಿ ಮನೆ ಹೊಂದಿದ್ದಾರೆ. ಅದರ ಮೌಲ್ಯ ಸುಮಾರು 15 ಕೋಟಿ. ಗ್ರೇಟರ್ ನೋಯ್ಡಾದ ಜೆಪಿ ವಿಶ್ ಟೌನ್ನಲ್ಲಿ 4 ಕೋಟಿ ರೂಪಾಯಿ ಮೌಲ್ಯದ ನಿವೇಶನ ಇದೆ. ಜೊತೆಗೆ ಮಲ್ಕಾಪುರ ಗ್ರಾಮದಲ್ಲಿ ಒಂದು ಮನೆಯಿದ್ದು, ಅದರ ಮೌಲ್ಯ 1 ಕೋಟಿ ರೂಪಾಯಿ ಎನ್ನಲಾಗಿದೆ. ಜೊತೆಗೆ 5 ಕೆಜಿ ಬೆಳ್ಳಿ ಕೂಡ ಇದೆ.
ಗೌತಮ್ ಗಂಭೀರ್ ಕೊನೆಯ ಐಪಿಎಲ್ ಆಡಿದ್ದು 2018ರಲ್ಲಿ. ಆ ಒಂದು ಋತುವಿನಲ್ಲಿ ಅವರು 2.8 ಕೋಟಿ ರೂಪಾಯಿ ಪಡೆದಿದ್ದರು. ಐಪಿಎಲ್ 2024ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ಗೆ ಮೆಂಟರ್ ಆಗಿ ಸೇರಿಕೊಂಡರು. ಐಪಿಎಲ್ 2024-2025ರಲ್ಲಿ ಮಾರ್ಗದರ್ಶಕರಾಗಿ ಕೆಲಸ ಮಾಡಲು ಗಂಭೀರ್ ಅವರು 25 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಹೇಳಲಾಗಿದೆ.