ಗದಗ: ಆಧುನಿಕ ಜಗತ್ತಿನಲ್ಲಿ ವಿಜ್ಞಾನ ಎಷ್ಟೇ ಅಭಿವೃದ್ಧಿಗೊಂಡರೂ ಒಂದು ಹನಿ ರಕ್ತ ತಯಾರು ಮಾಡಲು ಸಾಧ್ಯವಾಗುವುದಿಲ್ಲ ರಕ್ತವನ್ನು ಮನುಷ್ಯನೇ ದಾನ ಮಾಡಬೇಕು ಎಂದು ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪೂಜ್ಯ ಕಲ್ಲಯಜ್ಜನವರು ತಿಳಿಸಿದರು.
ವಿಶ್ವ ರಕ್ತದಾನ, ಪತ್ರಿಕ ದಿನಾಚರಣೆ, ವೈದ್ಯ ಹಾಗೂ ಯೋಗ ದಿನಾಚರಣೆ ಅಂಗವಾಗಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ದೇವು ಹಡಪದ ಅಭಿಮಾನಿ ಬಳಗದ ವತಿಯಿಂದ 44ನೇ ಜನ್ಮದಿನಾಚರಣೆ ಶಿವು ಲಕ್ಕಿ ಮೆನ್ಸ್ ಪಾರ್ಲರ್ ಇದರ 15ನೇ ವಾರ್ಷಿಕೋತ್ಸವ ಹಾಗೂ ಬಸವೇಶ್ವರ ರಕ್ತಕೇಂದ್ರ ಗದಗ ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಜರುಗಿದ ರಕ್ತದಾನ ಶಿಬಿರ ರಕ್ತದ ಮಾದರಿ ಗುರುತಿಸುವುದು ಹಾಗೂ ಲಕ್ಕಿ ಬ್ಲಡ್ ಹೆಲ್ಪಿಂಗ್ ಫೌಂಡೇಶನ್ ಉದ್ಘಾಟನೆ ನೆರೆವೇರಿಸಿ ಅವರು ಮಾತನಾಡಿದರು.
ಅಪಘಾತವಾಗಿ ತುತ್ತು ಚಿಕಿತ್ಸೆಗೆ ಹೆರಿಗೆ ರಕ್ತ ಹೀನತೆಯಿಂದ ಬಳಲುತ್ತಿರುವವರಿಗೆ ರಕ್ತ ಅತ್ಯವಶ್ಯಕತೆ ಇರುತ್ತದೆ ಇಂತಹ ಸಂದರ್ಭದಲ್ಲಿ ದಾನ ಮಾಡಿದ ರಕ್ತ ಅನೇಕ ಜೀವ ಉಳಿಸುತ್ತದೆ ಆದ್ದರಿಂದ ಎಲ್ಲರೂ ಸ್ವಯಂ ಪ್ರೇರಣೆಯಿಂದ ರಕ್ತದಾನಕ್ಕೆ ಮುಂದಾಗಬೇಕು ಕಳೆದ ಅನೇಕ ವರ್ಷಗಳಿಂದ ದೇವು ಹಡಪದ್ ಕುಟುಂಬಸ್ಥರು ಹಾಗೂ ಗೆಳೆಯರು ಸೇರಿ ಅನೇಕರಿಗೆ ರಕ್ತದಾನ ಮಾಡಿದ್ದಾರೆ ಹಾಗೆ 15 ವರ್ಷಗಳಿಂದ ಪುಣ್ಯಶ್ರಮದ ಬಡ ಮಕ್ಕಳಿಗೆ ಉಚಿತ ಕ್ಷೌರ ಸೇವಾ ಕೂಡ ಮಾಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪತ್ರಕರ್ತರಿಗೆ ವೈದ್ಯರಿಗೆ ಸಂಗೀತಗಾರರಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು. ಈ ವೇಳೆ ನಾಗರಾಜ್ ಮುಖೆ ಅಧ್ಯಕ್ಷತೆ ವಹಿಸಿದ್ದರು ಶಿವು ವಾಲಿಕರ, ಮೌನೇಶ ಬಡಿಗೇರ, ಮೋಹನ್ ಚಂದಪ್ಪನವರ, ಗವಿಸಿದ್ದಯ್ಯ ಹಳ್ಳಿಕೇರಿಮಠ, ನಾಗಪ್ಪ ಹಡಪದ, ಈಶಪ್ಪ ಬಡಿಗೇರ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು