ಗದಗ:- ರಾಜ್ಯದ ಪ್ರಸಿದ್ಧ ಗದಗನ ಜಿಮ್ಸ್ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿಗಳು ಚಲಚಿತ್ರದ ಹಾಡಿಗೆ ರೀಲ್ಸ್ ಮಾಡುವ ಮೂಲಕ ಪೇಚಿಗೆ ಸಿಲುಕಿಕೊಂಡಿದ್ದಾರೆ.
ವೈದ್ಯಕೀಯ ವಿದ್ಯಾರ್ಥಿಗಳು ನಟ ರವಿಚಂದ್ರ ಅವರ ಪ್ರೇಮಲೋಕ ಚಿತ್ರದ “ಹಲೋ ಮೈ ಲವ್ಲಿ ಲೇಡಿ ಹೂ ಆರ್ ಯು” ಹಾಡಿಗೆ ಮತ್ತು ಹಿಂದಿ ಚಿತ್ರ ಹಾಡಿಗೆ ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಮಾಡಿದ್ದಾರೆ. ಇದನ್ನು ಕಂಡ ಸಾರ್ವಜನಿಕರು ರೋಗಿಗಳ ಆರೈಕೆ ಮಾಡಬೇಕಾದವರು ಈ ರೀತಿ ಆಸ್ಪತ್ರೆಯಲ್ಲಿ ರೀಲ್ಸ್ ಮಾಡುತ್ತಾ ಕುಳಿತರೆ ಹೇಗೆ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Bengaluru: ಡಬ್ಬಲ್ ಮರ್ಡರ್ ಕೇಸ್ -ಭೀಕರ ಹತ್ಯೆಯ ಎಕ್ಸ್ ಕ್ಲ್ಯೂಸಿವ್ ವಿಡಿಯೋ ವೈರಲ್!
ಜಿಮ್ಸ್ ಆಸ್ಪತ್ರೆಯ ಕಾರಿಡಾರ್ನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ರೀಲ್ಸ್ ಮಾಡಿರುವ ವಿಡಿಯೋ ಸಾಮಾಜಿ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ವಿದ್ಯಾರ್ಥಿಗಳು ಆಸ್ಪತ್ರೆ ಒಳಗೆ ಎಲ್ಲೆಂದರಲ್ಲಿ ರೀಲ್ಸ್ ಮಾಡಿದ್ದಾರೆ. ಈ ರೀಲ್ಸ್ಗಳನ್ನು ಕಂಡ ನೆಟ್ಟಿಗರು ನಿಮ್ಮ ಹುಚ್ಚಾಟಕ್ಕೆ ಬೇರೆ ಜಾಗ ಸಿಗಲಿಲ್ವಾ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯಲ್ಲಿ ಅರಳಿದ ಪ್ರತಿಭೆಗಳು, ಪೆಶೆಂಟ್ ಜಸ್ಟ್ ಮೋಯಾ.. ಮೋಯಾ..ಅಂತ ಪೋಸ್ಟ್ ಹಾಕಿ ವಿಡಿಯೋ ವೈರಲ್ ಮಾಡಲಾಗಿದೆ.
2023ರ ಅಗಸ್ಟ್ನಲ್ಲಿ ಹುಬ್ಬಳ್ಳಿಯ ಕಿಮ್ಸ್ನ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿಗಳು ಆಸ್ಪತ್ರೆಯ ನರ್ಸ್ಗಳನ್ನು ಗುರಿಯಾಗಿಟ್ಟುಕೊಂಡು ಇನ್ಸ್ಟಾಗ್ರಾಮ್ನಲ್ಲಿ ರಿಲ್ಸ್ ಮಾಡಿದ್ದರು. ಇದಕ್ಕೆ ಕರ್ನಾಟಕ ರಾಜ್ಯ ನರ್ಸ್ ಅಸೋಸಿಯೇಷನ್ ಆಕ್ರೋಶ ವ್ಯಕ್ತಪಡಿಸಿತ್ತು. ಯಾವುದೇ ಅನುಮತಿ ಪಡೆಯದೆ ಕಿಮ್ಸ್ ಆಸ್ಪತ್ರೆ ಒಳಗಡೆ ನಟ ಪ್ರಜ್ವಲ್ ದೇವರಾಜ್ ಅಭಿನಯದ ಭದ್ರ ಚಿತ್ರದ ನಂಬೆಡ ನಂಬೆಡ ಹುಡುಗಿರನ್ನು ನಂಬೇಡ ಅನ್ನೋ ಹಾಡಿಗೆ ವಿದ್ಯಾರ್ಥಿಗಳು ರೀಲ್ಸ್ ಮಾಡಿದ್ದರು. ಈ ಹಾಡಿನ ಮಧ್ಯೆ ಬರುವ ನಂಬೆಡ ನಂಬೆಡ ನರ್ಸ್ಗಳನ್ನು ನಂಬೇಡ ಸಾಲಿಗೆ ನೃತ್ಯ ಮಾಡಿದ್ದರು. ಈ ವಿಡಿಯೋವನ್ನು ಮಹೇಶ್ ರೆಡ್ಡಿ ಎಂಬುವ ವಿದ್ಯಾರ್ಥಿಯ ಅಕೌಂಟ್ನಿಂದ ಪೋಸ್ಟ್ ಮಾಡಲಾಗಿತ್ತು.
ಈ ವಿಡಿಯೋ ಫುಲ್ ವೈರಲ್ ಆದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ನರ್ಸ್ ಅಸೋಸಿಯೇಷನ್ ಮತ್ತು ಧಾರವಾಡ ಜಿಲ್ಲಾ ಶುಶ್ರೂಷಕರ ಸಂಘ ಕಿಮ್ಸ್ ನಿರ್ದೇಶಕರಿಗೆ ಪತ್ರ ಬರೆದಿತ್ತು. ರೀಲ್ಸ್ ಮಾಡಿದ್ದ 11 ಜನ ವಿದ್ಯಾರ್ಥಿಗಳನ್ನು ಒಂದು ವಾರದ ಮಟ್ಟಿಗೆ ಅಮಾನತು ಮಾಡಿ ಪ್ರಾಂಶುಪಾಲ ಡಾ.ಈಶ್ವರ ಹೊಸಮನಿ ಆದೇಶ ಹೊರಡಿಸಿದ್ದರು