ಗದಗ:- ರೈತರಿಂದ ಕಡಲೆ ಖರೀದಿಸಿದ ಬಾಕಿ ಹಣ ನೀಡದ ವಿಚಾರಕ್ಕೆ ಅನ್ನದಾತರ ಪ್ರತಿಭಟನೆ ಅಹೋರಾತ್ರಿ ಮುಂದುವರೆದಿದೆ. ಗದಗ ಜಿಲ್ಲೆಯ ಸುಮಾರು 450 ರೈತರಿಗೆ ಕಡಲೆ ಮಾರಿದ ಹಣದ ಬಾಕಿ 6 ಕೋಟಿ 50 ಲಕ್ಷ ರೂಪಾಯಿ ಹಣ ಕಳೆದ ಒಂದು ವರ್ಷದಿಂದ ಬಂದಿಲ್ಲ. ಹಲವಾರು ಬಾರಿ ಹಣ ಕೊಡಿಸಿ ಅಂತಾ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ.
Lokayukta: ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್; ಕರ್ನಾಟಕದ ಎಂಟು ಕಡೆ ಲೋಕಾಯುಕ್ತ ದಾಳಿ!
ಹೀಗಾಗಿ ರೊಚ್ಚಿಗೆದ್ದ ಅನ್ನದಾತರು ಗದಗ ಜಿಲ್ಲಾಡಳಿತ ಭವನದ ಗೇಟ್ ಗೆ ಎತ್ತುಗಳನ್ನ ಕಟ್ಟಿ, ಅಲ್ಲೇ ಅಡುಗೆ ಮಾಡಿ, ಅಲ್ಲೇ ಮಲಗೋ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರಿ ಇಡೀ ಛಳಿಯಲ್ಲಿ ಬೆಂಕಿ ಕಾಯಿಸುತ್ತಾ ಕುಳಿತ ರೈತರ ಗೋಳು ಯಾರೂ ಕೇಳದಂತಾಗಿದೆ.
ಉತ್ತಿ ಬಿತ್ತಿ ಅನ್ನ ನೀಡಿದ ಅನ್ನದಾತ ಇಂದು ರಸ್ತೆಯಲ್ಲೇ ಅಡುಗೆ ಮಾಡಿ, ರಸ್ತೆಯಲ್ಲೇ ಮಲಗೋ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದ್ರೂ ಗದಗ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ಎಚ್ಚೆತ್ತು ರೈತರಿಗೆ ನ್ಯಾಯ ಕೊಡಿಸಿ ಅನ್ನ ನೀಡಿದ ಅನ್ನದಾತರ ಕೈ ಹಿಡಿಯಬೇಕಿದೆ.