ಗದಗ:- ಲಾರಿ ಹಾಗೂ ಬಸ್ ನಡುವೆ ಡಿಕ್ಕಿಯಾಗಿ ಭೀಕರ ಅಪಘಾತವಾಗಿದ್ದು, ಇಬ್ಬರು ಸಾವಿಗೀಡಾದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಕೇರಿ ಬಳಿ ಜರುಗಿದೆ.
ಘಟನೆಯಲ್ಲಿ ಸುಮಾರು 10 ಜನರಿಗೆ ಗಾಯವಾಗಿದೆ. ಕೊಪ್ಪಳದಿಂದ ಗದಗ ಬರುತ್ತಿದ್ದ ಬಸ್ ಹಾಗೂ ಹುಬ್ಬಳ್ಳಿಯಿಂದ ಹೊಸಪೇಟೆಗೆ ಹೊರಟಿದ್ದ ಲಾರಿ ನಡುವೆ ಡಿಕ್ಕಿಯಾಗಿದೆ. ಲಾರಿ ಚಾಲಕ ಹಾಗೂ ಬಸ್ನಲ್ಲಿ ಮಹಿಳೆ ಸಾವು ಸ್ಥಳದಲ್ಲೇ ಸಾವಾಗಿದೆ. ಗದಗ ಜಿಲ್ಲೆಯ ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.