ಗದಗ:- ಸಾರಿಗೆ ಸಂಸ್ಥೆ ಬಸ್ ಹಾಗೂ ಬೈಕ್ ನಡುವೆ ಅಪಘಾತದಲ್ಲಿ ಸಂಭವಿಸಿ ಬೈಕ್ ಸವಾರ ಕಾಲು ಕಳೆದುಕೊಂಡ ಘಟನೆ, ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಕೋರ್ಟ್ ಸರ್ಕಲ್ ಬಳಿ ನಡೆದಿದೆ.
Breaking News: ಸೋಲಾರ್ ಪಾರ್ಕ್ ನಿರ್ಮಾಣ ವೇಳೆ ಬಂಡೆ ಸ್ಪೋಟಗೊಂಡು ಕಾರ್ಮಿಕ ದುರ್ಮರಣ!
ಗವಿಯಪ್ಪ ಬನ್ನಿಕೊಪ್ಪ (27) ಗಂಭೀರ ಗಾಯಗೊಂಡ ಬೈಕ್ ಸವಾರನಾಗಿದ್ದು, ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದ ನಿವಾಸಿಯಾಗಿದ್ದಾನೆ. ಮುಂಡರಗಿ ಪಟ್ಟಣದಿಂದ ಹಿರೇವಡ್ಡಟ್ಟಿ ಗ್ರಾಮಕ್ಕೆ ಗವಿಯಪ್ಪ ತೆರಳುತ್ತಿದ್ದನು. ಇತ್ತ ಗದಗನಿಂದ ಮುಂಡರಗಿ ಪಟ್ಟಣಕ್ಕೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ನಡುವೆ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಸವಾರನ ಕಾಲು ಕಟ್ ಆಗಿ ಮತ್ತೊಂದೆಡೆ ಬಿದ್ದಿದೆ. ಗಾಯಾಳು ಗವಿಯಪ್ಪನನ್ನ ಮುಂಡರಗಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.