ಗದಗ:- ಗದಗ-ಬೆಟಗೇರಿ ಅವಳಿ ನಗರಕ್ಕೆ ಕುಡಿಯುವ ನೀರಿನ ಕೊರತೆ ಹಿನ್ನೆಲೆ ಸ್ವತಃ ಸಿಂಗಟಾಲೂರ ಬ್ಯಾರೇಜ್ ಮತ್ತು ಲಿಫ್ಟಿಂಗ್ ಪಾಯಿಂಟ್ ಗೆ ಸಚಿವ ಎಚ್ ಕೆ ಪಾಟೀಲ್ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
Kodagu: ಸಿಹಿತಿಂಡಿ ನೀಡಿಲ್ಲ ಎಂಬ ಕಾರಣಕ್ಕೆ ಮುರಿದು ಬಿತ್ತು ಮದುವೆ… !
ಪರಿಶೀಲನೆ ಬಳಿಕ ಮಾತನಾಡಿದ ಹೆಚ್ ಕೆ ಪಾಟೀಲ್, ಬ್ಯಾರೇಜ್ ನಲ್ಲಿ ನೀರಿನ ಮಟ್ಟ ಡೆಡ್ ಸ್ಟೋರೇಜ್ ಗೆ ತಲುಪಿದೆ. ಡೆಡ್ ಸ್ಟೋರೇಜ್ ನಿಂದ ಕುಡಿಯುವ ನೀರಿಗಾಗಿ ನೀರನ್ನ ಪಂಪ್ ಮಾಡಲಾಗ್ತಿದೆ. ಇನ್ನೊಂದು ವಾರ ಅಷ್ಟೇ ನೀರು ಸಾಕಾಗತ್ತೆ. ಸಾಧ್ಯವಾದ ಮಾನವೀಯ ಪ್ರಯತ್ನಗಳನ್ನು ಮಾಡ್ತಿದ್ದೇವೆ. 4 ಇಂಚಿನ 13 ಪಂಪ್ ಗಳಿಂದ ಡೆಡ್ ಸ್ಟೋರೇಜ್ ನಿಂದ ನೀರನ್ನ ಲಿಫ್ಟಿಂಗ್ ಪಾಯಿಂಟ್ ಗೆ ಕಳಿಸ್ತಾ ಇವೆ. ಹಿಟಾಚಿ ಮೂಲಕ ಡೆಡ್ ಸ್ಟೋರೇಜ್ ನೀರನ್ನ ಹರಿಸೋ ಕೆಲಸ ನಡೆದಿದೆ. ನೀರಿನ ಕೊರತೆ ಬಹಳ ಇದೆ. ಭದ್ರಾದಿಂದ ನೀರನ್ನ ಪಡೆಯೋ ಪ್ರಯತ್ನ ಕೂಡಾ ನಡೆದಿದೆ. ನೀರನ್ನ ಮಿತವಾಗಿ ಬಳಸೋದು ಅನಿವಾರ್ಯದ ಪರಿಸ್ಥಿತಿ. ದಯಮಾಡಿ ನೀರನ್ನ ಮಿತವಾಗಿ ಬಳಸಿ. ಯಾವುದೇ ಕಾರಣಕ್ಕೂ ನೀರನ್ನ ವೇಸ್ಟ್ ಮಾಡಬೇಡಿ ಎಂದು ಸಚಿವ ಎಚ್ ಕೆ ಪಾಟೀಲ್ ಮನವಿ ಮಾಡಿದ್ದಾರೆ.
ಮಳೆ ನಮಗೆ ಸೂಕ್ತ ಪರಿಹಾರ ನೀಡಬೇಕಾಗಿದೆ. ವರುಣನಲ್ಲಿ ಪ್ರಾರ್ಥನೆ ಮಾಡ್ತೇನೆ ಎಂದು ಸಚಿವ ಎಚ್ ಕೆ ಪಾಟೀಲ್ ಹೇಳಿದ್ದಾರೆ.