ಗದಗ:- ಗೋಡೆ ಕುಸಿದು 8 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಜರುಗಿದೆ.
ಲಾಂಗ್ನಿಂದ ಕೊಚ್ಚಿ ಜೆಡಿಎಸ್ ಮುಖಂಡನ ಬರ್ಬರ ಕೊಲೆ ಕೇಸ್: ಆರೋಪಿಗಳು ಅಂದರ್!
ಗೋಡೆ ಪಕ್ಕದಲ್ಲಿ ಅವಿತುಕೊಂಡು ಆಟ ಆಡುವಾಗ ಮೈಮೇಲೆ ಗೋಡೆ ಕುಸಿದು 8 ವರ್ಷದ ಪ್ರದೀಪ ಗೋನಾಳ ಸಾವನ್ನಪ್ಪಿದ್ದಾರೆ. ನರಗುಂದ ಪಟ್ಟಣದ ದಂಡಾಪೂರ ಕುರುಬಗೇರಿ ಓಣಿಯಲ್ಲಿ ಘಟನೆ ಜರುಗಿದೆ.
ಶಾಲೆಯಿಂದ ಮನೆಗೆ ಬಂದ ಬಳಿಕ ಗೆಳೆಯರೊಂದಿಗೆ ಆಟವಾಡುವಾಗ ಘಟನೆ ಜರುಗಿದೆ. ಗೋಡೆ ಬಿದ್ದ ಬವಾರಿ ಶಬ್ದಕ್ಕೆ ಓಡಿ ಬಂದು ಸ್ಥಳೀಯರಿಂದ ರಕ್ಷಣೆ ಕಾರ್ಯ ನಡೆದಿದೆ. ಆಸ್ಪತ್ರೆಗೆ ಸಾಗಿಸೋ ಮಧ್ಯ ಸಾವನ್ನಪ್ಪಿದ್ದಾರೆ.
ಮಗು ಕಳೆದುಕೊಂಡ ತಾಯಿ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನರಗುಂದ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.