ಗದಗ:- ತಾಲೂಕಿನ ಹುಲಕೋಟಿ ಬಳಿ ಸಂಭವಿಸಿದ ಭೀಕರ ಕಾರ್ ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ಜರುಗಿದೆ.
ಶುಗರ್ ಕಂಟ್ರೋಲ್ ಆಗಲು ಮನೆ ಹಿತ್ತಲಲ್ಲೇ ಇದೆ ಮದ್ದು: ಈ ಎಲೆಯ ಸೇವನೆ ಹೀಗಿರಲಿ!
ಮಹ್ಮದ್ ಜಾಯಿದ್ 18, ಸಂಜೀವ ಗಿರಡ್ಡಿ 15 ಮೃತ ದುರ್ದೈವಿಗಳು. ಆಶೀಶ್ ಗುಡುರ್, ಚಾಲಕ ಸಪ್ತಗಿರಿ ಎಂಬುವರಿಗೆ ಗಂಭೀರ ಗಾಯವಾಗಿದೆ. ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹುಲಕೋಟಿ ಯಿಂದ ಗದಗ ಬರುವಾಗ ಡಿವಾಡರ್ ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ವೇಗವಾಗಿ ಬರುತ್ತಿದ್ದ ಕಾರ್ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ.
ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.