ಬೆಂಗಳೂರು:- ಹವಾಮಾನ ವೈಪರಿತ್ಯದಿಂದಾಗಿ ಬೆಂಗಳೂರಿನಲ್ಲಿ ಫಂಗಲ್ ಇನ್ಫೆಕ್ಷನ್ ಹಾಗೂ ಥ್ರೋಟ್ ಇನ್ಫೆಕ್ಷನ್ ಹೆಚ್ಚಳವಾಗುತ್ತಿದೆ.
ಹೆಚ್ಚು ಬಿಸಿಲು ಅಂತ ಅತೀವವಾದ ತಣ್ಣನೆಯ ಆಹಾರ ಪದಾರ್ಥಗಳನ್ನ ಸೇವಿಸುವುದರ ಜೊತೆಗೆ ನೀರು ಕುಡಿಯುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲದೇ ಹವಾಮಾನದಲ್ಲಿನ ಬದಲಾವಣೆಗೆ ದೇಹ ತಕ್ಷಣಕ್ಕೆ ಹೊಂದಿಕೊಳ್ಳುವುದಿಲ್ಲ. ಈ ವೇಳೆ ಥ್ರೋಟ್ ಇನ್ಫೆಕ್ಷನ್ ಕೇಸ್ಗಳು ಹೆಚ್ಚಾಗಿ ಕಂಡು ಬರಲಿದೆ. ಅಂದ ಹಾಗೇ ಈ ಥ್ರೋಟ್ ಇನ್ಫೆಕ್ಷನ್ ಬಂದಾಗ ಕಂಟಲು ನೋವು ಬರುವುದು, ಏರು ಉಸಿರು ಕಾಣಿಸಿಕೊಳ್ಳುವುದು, ತಲೆಭಾರವಾಗುವುದು, ಅಲರ್ಜಿ ಆಗುವಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸಧ್ಯ ಸಿಲಿಕಾನ್ ಸಿಟಿಯಲ್ಲಿ 10% ರಷ್ಟು ಥ್ರೋಟ್ ಇನ್ಫೆಕ್ಷನ್ ಕಾಣಿಸಿಕೊಳ್ಳುತ್ತಿದ್ದು, ಮಧ್ಯ ವಯಸ್ಕರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ.
ಇನ್ನು, ಥ್ರೋಟ್ ಇನ್ಫೆಕ್ಷನ್ ಜೊತೆಗೆ ಫಂಗಲ್ ಇನ್ಫೆಕ್ಷನ್ ಕೇಸ್ಗಳು ಸಹ ಹೆಚ್ಚಾಗುತ್ತಿವೆ. ಮಳೆ ಬಂದಂತಹ ಸಂದರ್ಭದಲ್ಲಿ ತೇವಾಂಶದ ಅಂಶ ಹೆಚ್ಚು ಇದ್ದಾಗಾ ಫಂಗಲ್ ಇನ್ಫೆಕ್ಷನ್ ಕೇಸ್ಗಳು ಹೆಚ್ಚಾಗುತ್ತವೆ. ಮಳೆಯ ಸಂದರ್ಭದಲ್ಲಿ ತೇವದ ಬಟ್ಟೆ, ತೇವಾದ ಒಳಡುಪುಗಳು, ನೀರಿನಲ್ಲಿ ಹೆಚ್ಚು ಕೆಲಸ ಮಾಡುವುದರಿಂದ ಸ್ಕಿನ್ ಮೇಲೆ ಫಂಗಸ್ಗಳು ಉಂಟಾಗುತ್ತವೆ. ಈ ಫಂಗಲ್ ಇನ್ಫೆಕ್ಷನ್ ಹೆಚ್ಚಾದಾಗ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಕಡಿಮೆಯಾಗುತ್ತದೆ. ಇದರಿಂದ ಸ್ಕಿನ್ನಲ್ಲಿ ವೈಟ್ ಪ್ಯಾಚಾಸ್ ಉಂಟಾಗುವುದು, ಸ್ಕಿನ್ ಡ್ರೈ ಆಗುವುದು, ತುರುಕೆ ಬರುವುದು ಹೆಚ್ಚಾಗುತ್ತದೆ. ಇಂತಹ ಗುಣಲಕ್ಷಣಗಳು ಕಂಡುಬಂದಾಗ ಆರೋಗ್ಯದ ಮೇಲೆ ನಿಗಾ ವಹಿಸಿ ಅಂತ ವೈದ್ಯರು ತಿಳಿಸಿದ್ದಾರೆ.