ಬೆಂಗಳೂರು:- ತಾಳಿ ಕಟ್ಟುವ ಶುಭವೇಳ ಮಂಟಪದಿಂದ ವರ ಪರಾರಿಯಾದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ.
ಮೆಹಂದಿ, ಹಳದಿ ಶಾಸ್ತ್ರ ಮುಗಿಸಿ ಮದುವೆ ದಿನ ದುಬಾರಿ ವರ ಪರಾರಿಯಾಗಿದ್ದು, ಮೈಸೂರಿನಲ್ಲಿ ಸ್ನೇಹ ಪ್ಯಾರಿಸ್ ನಲ್ಲಿ ಹುಟ್ಟಿದ ಪ್ರೀತಿ ಮದುವೆವರೆಗೂ ಬಂದಿತ್ತು. ಎಲ್ಲವೂ ಚೆನ್ನಾಗಿ ನಡೆಯುತ್ತಿದ್ದ ಹೊತ್ತಲ್ಲಿ ಅದೇನಾಯಿತೋ ಏನೋ ವರ ಮದುವೆ ಹಿಂದಿನ ರಾತ್ರಿ ಪ್ರಿಯತಮ ಪರಾರಿ ಆಗಿದ್ದಾನೆ. ಇದೀಗ ಮದುವೆ ದಿನ ಕಾಲ್ಕಿತ್ತ ವರ ಪ್ರೇಮ್ ಚಂದ್ ವಿರುದ್ಧ ವಧುವಿನ ತಂದೆ ದೂರು ಕೊಟ್ಟಿದ್ದಾರೆ.
ವಧುವವಿನ ತಂದೆ ಬಳಿ ಬಂದು 50 ಲಕ್ಷ ನಗದು, ಅರ್ಧ ಕೆಜಿ ಚಿನ್ನ, ಬೆಂಜ್ ಕಾರಿಗೆ ಡಿಮ್ಯಾಂಡ್ ಹಾಕಿದ್ದಾರೆ. ಕೊಡಲ್ಲ ಅಂದಿದ್ದಕ್ಕೆ ಹೇಳದೆ-ಕೇಳದೆ ವರನ ಕಡೆಯವರು ಪರಾರಿ ಅಂತ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಉಪ್ಪರಪೇಟೆ ಪೊಲೀಸ್ ಠಾಣೆಯಲ್ಲಿ ವರ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ.
ಮೈಸೂರಿನ ಕೇಂದ್ರಿಯ ವಿದ್ಯಾಲಯದಲ್ಲಿ ಪ್ರೇಮ್ ಚಂದ್ ಸಂತ್ರಸ್ತೆ ಕ್ಲಾಸ್ ಮೇಟ್ ಆಗಿದ್ದ. ಪ್ರೇಮ್ ಚಂದ್ ಪವನಿ ಹಾಗೂ ಸಂತ್ರಸ್ತೆ ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ರು. ಬಿಇ ಬಳಿಕ ಎಂಎಸ್ ಮುಗಿಸಿದ ಯುವತಿ ಫ್ರಾನ್ಸ್ ನಲ್ಲಿ ಕೆಲಸಕ್ಕೆ ಸೇರಿದ್ದಳು. ಆರೋಪಿ ಪ್ರೇಮ್ ಚಂದ್ ಕೂಡ ಪ್ಯಾರೀಸ್ನಲ್ಲಿ ಕೆಲಸಕ್ಕೆ ಸೇರಿದ್ದ. ಇಬ್ಬರ ಸ್ನೇಹ ಬಳಿಕ ಪ್ರೀತಿ ತಿರುಗಿ ಪ್ಯಾರೀಸ್ ನಲ್ಲಿ ಪ್ರಣಯ ಪಕ್ಷಿಗಳಂತೆ ಸುತ್ತಾಡಿದ್ದಾರೆ. ಇಬ್ಬರು ಮನೆಯವರ ಒಪ್ಪಿಸಿ ಕಳೆದ ಜುಲೈನಲ್ಲಿ ಎಂಗೇಜ್ಮೆಂಟ್ ಆಗಿದ್ದಾರೆ.
ಕುಟುಂಬಸ್ಥರು ಫೆಬ್ರವರಿ 2ರಂದು ಪ್ರೇಮ್ ಚಂದ್ ಹಾಗೂ ಯುವತಿಗೆ ಮದುವೆ ಫಿಕ್ಸ್ ಮಾಡಿದ್ರು. ಅದರಂತೆ ಯುವತಿ ತಂದೆ, ಗಾಂಧಿನಗರದ ನಂದಿ ಕ್ಲಬ್ ಕೂಡ ಬುಕ್ ಮಾಡಿದ್ದ. ಜನವರಿ 28ರಿಂದಲೇ ಮದುವೆ ಕಾರ್ಯಕ್ರಮ ಶುರುವಾಗಿತ್ತು. 1ನೇ ತಾರೀಕು ಮೆಹಂದಿ ಹಾಗೂ ಹಳದಿ ಶಾಸ್ತ್ರ ಕೂಡ ಮುಗಿದಿತ್ತು ಆಗ ಯುವತಿ ತಂದೆ ಬಳಿ ಬಂದು 50 ಲಕ್ಷ ನಗದು, ಅರ್ಧ ಕೆಜಿ ಚಿನ್ನ, ಬೆಂಜ್ ಕಾರು ಕೂಡುವಂತೆ ಡಿಮ್ಯಾಂಡ್ ಹಾಕಿದ್ದಾರೆ.
ವರನ ತಂದೆ ಶಿವಕುಮಾರ್ ಪವಾನಿ, ತಾಯಿ ರಾಧ, ಸಂಬಂಧಿ ಮಂಜು ಭರತ್ ರಿಂದ ಬೇಡಿಕೆ ಇಟ್ಟಿದ್ದಾರೆ. ಮದುವೆಗೆ ಲಕ್ಷಾಂತರ ರೂಪಾಯಿ ಖರ್ಚು ಆಗಿದೆ ಅಷ್ಟು ಕೊಡಲು ಆಗಲ್ಲ ಎಂದು ವಧುವಿನ ತಂದೆ ಹೇಳಿದ್ದಾರೆ. ಅಷ್ಟು ಹೇಳ್ತಿದ್ದಂತೆ ರಾತ್ರೋ ರಾತ್ರಿ ವರ ಹಾಗೂ ಆತನ ಕಡೆಯವರು ಗಂಟುಮೂಟೆ ಕಟ್ಟಿದ್ದಾರೆ. ಬೆಳಗ್ಗೆ ಮದುವೆ ಶಾಸ್ತ್ರಕ್ಕೆ ವರನ ಕರೆಯಲು ಹೋದಾಗ ಯಾರು ಇಲ್ಲದ್ದು ಗೊತ್ತಾಗುತ್ತೆ. ಶಾಕ್ ಗೆ ಒಳಗಾದ ಯುವತಿ ತಂದೆ, ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಅಷ್ಟೇ ಅಲ್ಲ ವರನ ಮೇಲೆ ಯುವತಿಯನ್ನ ಮದುವೆಗೂ ಮುನ್ನ ಲೈಗಿಂಕವಾಗಿ ಬಳಸಿಕೊಂಡ ಆರೋಪ ಕೇಳಿ ಬಂದಿದ್ದು, ದೂರಿನಲ್ಲಿ ಯುವತಿಯನ್ನ ಬಲವಂತವಾಗಿ ಲೈಗಿಂಕವಾಗಿ ಬಳಸಿಕೊಂಡಿದ್ದಾನೆಂದು ಉಲ್ಲೇಖ ಮಾಡಲಾಗಿದೆ. ಯುವತಿ ತಂದೆಯ ದೂರಿನ ಅನ್ವಯ ಉಪ್ಪರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.