ಅಭಿಮಾನಿಗಳ ಪಾಲಿನ ದಾಸ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಟೇರ ಸಿನಿಮಾ ದೇಶಾದ್ಯಂತ ಭರ್ಜರಿಯಾಗಿ 457 ಥಿಯೇಟರ್ಗಳಲ್ಲಿ ಕಾಟೇರ ಸಿನಿಮಾ ರಿಲೀಸ್ ಆಗಿದೆ. ಹೌದು ಸಿನಿಮಾ ಡಿಸೆಂಬರ್ 29 ರಂದು ಅದ್ಧೂರಿಯಾಗಿ ರಿಲೀಸ್ ಆಗಿದೆ., ಅದಕ್ಕೂ ಮೊದಲೇ ಟಿಕೆಟ್ ಸೋಲ್ಡ್ ಔಟ್ ಆಗಿವೆಯಂತೆ. ಈ ಮೂಲಕ ನಟ ದರ್ಶನ್ ಅವರ ಸಿನಿಮಾ ಅಬ್ಬರ ಏನು? ಅನ್ನೋದು ಜಗತ್ತಿಗೆ ಗೊತ್ತಾಗುತ್ತಿದೆ.
ಹೌದು 2023 ಡಿ-ಬಾಸ್ ದರ್ಶನ್ ಅವರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಸರ್ಪ್ರೈಸ್ ಕೊಟ್ಟಿದೆ. ಯಾಕೆ ಅಂದ್ರೆ, ಈ ವರ್ಷವೇ ಎರಡೆರಡು ಸಿನಿಮಾ ರಿಲೀಸ್ ಆಗುತ್ತಿವೆ. ಕೆಲವು ತಿಂಗಳ ಹಿಂದಷ್ಟೇ ‘ಕ್ರಾಂತಿ’ ಸಿನಿಮಾ ರಿಲೀಸ್ ಆಗಿ ದಾಖಲೆಗಳನ್ನ ಧೂಳಿಪಟ ಮಾಡಿತ್ತು. ಇದೀಗ ಫ್ಯಾನ್ಸ್ ಪಾಲಿನ ಡಿ-ಬಾಸ್, ನಟ ದರ್ಶನ್ ಅವರು ಕಾಟೇರ ಸಿನಿಮಾ ಮೂಲಕ ರೀ ಎಂಟ್ರಿಯನ್ನ ಕೊಡ್ತಿದ್ದಾರೆ. ಹೀಗಾಗಿ ಸಹಜವಾಗಿಯೇ ಅಭಿಮಾನಿಗಳಿಗೆ ಕುತೂಹಲ ಇದೆ. ಹೀಗಿದ್ದಾಗ ಈ ಸಿನಿಮಾ ನೋಡಲು ಫ್ಯಾನ್ಸ್ ಮುಗಿಬೀಳುತ್ತಿದ್ದಾರೆ
ಡಿಸೆಂಬರ್ 29 ರಂದು ಬಿಡುಗಡೆಯಾಗಿದ್ದ ಚಿತ್ರ 200 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ… ಈಗ ಈ ಸಿನಿಮಾ OTT ವೇದಿಕೆಗೂ ಕಾಲಿಡಲು ರೆಡಿಯಾಗಿದೆ.. ಚಿತ್ರವು ಫೆಬ್ರವರಿ 9 ರಂದು OTT ZEE5 ನಲ್ಲಿ ಬಿಡುಗಡೆಯಾಗಲಿದೆ ಎಂದು ವರದಿಯಾಗಿದೆ.
ಸಲಾರ್ ಗೆ ಪೈಪೋಟಿ ನೀಡಿರುವ ಈ ಚಿತ್ರವನ್ನು ಥಿಯೇಟರ್ನಲ್ಲಷ್ಟೇ ಅಲ್ಲದೇ ಸಣ್ಣ ಪರದೆಯಲ್ಲೂ ನೋಡಲು ಸಾಕಷ್ಟು ಪ್ರೇಕ್ಷಕರು ಕಾಯುತ್ತಿದ್ದಾರೆ. ತರುಣ್ ಸುಧೀರ್ ನಿರ್ದೇಶಿಸಿರುವ ಈ ಸಿನಿಮಾ ಥಿಯೇಟರ್ ನಲ್ಲಿ ಧೂಳೆಬ್ಬಿಸಿರುವ ಹಾಗೇ ಒಟಿಟಿಯಲ್ಲಿ ಎಷ್ಟರ ಮಟ್ಟಿಗೆ ಸೆನ್ಸೇಷನ್ ಕ್ರಿಯೇಟ್ ಮಾಡುತ್ತೆ ಎನ್ನುವುದನ್ನು ಕಾದುನೋಡಬೇಕು..