ಇತ್ತೀಚಿನ ದಿನಗಳಲ್ಲಿ ಅಸುರಕ್ಷಿತ ಬೈಕ್ ಸಂಚಾರದಿಂದ ಸಾಲು ಸಾಲು ಅಪಘಾತಗಳು ಸಂಭವಿಸುತ್ತಿವೆ. ರಾಜ್ಯ ಸರ್ಕಾರ ರಸ್ತೆ ನಿಯಮ ಉಲ್ಲಂಘನೆಗೆ ಸಾವಿರಾರು ರೂಪಾಯಿ ದಂಡ ಹಾಕಿದರೂ ಬದಲಾವಣೆ ಕಂಡಿಲ್ಲ. ಇನ್ನು ಹೆಲ್ಮೆಟ್ ಕುರಿತು ಸಂಚಾರಿ ಪೊಲೀಸರು ರಸ್ತೆಗಿಳಿದು ಜಾಗೃತಿ ಮೂಡಿಸಿದರೂ ಸುಧಾರಣೆಯಾಗಿಲ್ಲ. ಬೈಕ್ ಕ್ರೇಜ್ ಗೆ ಅದೆಷ್ಟೋ ಜೀವಗಳು ನಡು ರಸ್ತೆಯಲ್ಲೇ ಜೀವ ಕಳೆದುಕೊಂಡಿವೆ.
ಆದ್ದರಿಂದ ಹೆಲ್ಮೆಟ್ ಹಾಕದಿದ್ದರೆ ಪೆಟ್ರೋಲ್ ಇಲ್ಲ ಅಂತ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಹೊಸ ರೂಲ್ಸ್ ಜಾರಿ ಮಾಡಿದೆ. ರಸ್ತೆ ಅಪಘಾತ ಕಡಿಮೆ ಮಾಡುವ ಮತ್ತು ದ್ವಿಚಕ್ರ ವಾಹನಗಳ ಅಪಘಾತದಿಂದ ಸಂಭವಿಸುವ ಸಾವು-ನೋವಿನ ಪ್ರಮಾಣ ಕಡಿಮೆ ಮಾಡಲು ಸಾರಿಗೆ ಇಲಾಖೆ ಈ ನೂತನ ಕ್ರಮ ಕೈಗೊಂಡಿದೆ.
Nail Cutting: ಸಂಜೆ ವೇಳೆ ಉಗುರು ಕತ್ತರಿಸುತ್ತೀರಾ? ಮನೆಗೆ ಬರುವ ಲಕ್ಷ್ಮೀ ವಾಪಸ್ ಹೋಗಬಹುದು, ಎಚ್ಚರಾ!
ಬೈಕ್ ಸವಾರ ಮಾತ್ರವಲ್ಲ, ಹಿಂಬದಿ ಸವಾರರೂ ಹೆಲ್ಮೆಟ್ ಧರಿಸಿರಬೇಕು. ಇಲ್ಲದಿದ್ದರೆ ಪೆಟ್ರೋಲ್ ಹಾಕಬೇಡಿ ಅಂತ ಉತ್ತರ ಪ್ರದೇಶದ ಎಲ್ಲಾ ಪೆಟ್ರೋಲ್ ಬಂಕ್ಗಳಿಗೆ ಸಾರಿಗೆ ಇಲಾಖೆ ಪತ್ರ ಬರೆದಿದೆ. ಅಲ್ಲದೇ, 75 ಡಿಸಿಗಳಿಗೆ ಈ ಬಗ್ಗೆ ನಿಗಾವಹಿಸುವಂತೆ ಆದೇಶಿಸಿದೆ.
ಈ ತಿಂಗಳ ಆರಂಭದಲ್ಲಿ ರಾಜ್ಯದಲ್ಲಿ ರಸ್ತೆ ಸುರಕ್ಷತಾ ಕ್ರಮಗಳ ಪರಿಶೀಲನೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನೀಡಿದ ನಿರ್ದೇಶನಗಳನ್ನು ಇದು ಎತ್ತಿ ತೋರಿಸುತ್ತದೆ. ರಾಜ್ಯದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಗಳಿಂದ 25,000-26,000 ಜೀವಗಳು ಬಲಿಯಾಗುತ್ತಿವೆ ಎಂದು ಮುಖ್ಯಮಂತ್ರಿ ಗಮನಿಸಿದ್ದರು.