ಮೈಸೂರು:- ಕರ್ನಾಟಕ ಸರಕಾರ ‘ಡಾ.ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ’ಯನ್ನು ಜಾರಿಗೆ ತರುವ ಮೂಲಕ ಹೃದಯಘಾತದಿಂದಾಗುವ ಸಾವು ನೋವಿನ ಪ್ರಮಾಣವನ್ನು ತಡೆಗಟ್ಟಲು ಮುಂದಾಗಿದೆ.
Dinesh Gundurao: ಡೆಂಗ್ಯೂ ಜತೆ ಝೀಕಾ ವೈರಸ್ ಬಗ್ಗೆಯೂ ಅಲರ್ಟ್ ಆಗಿರಿ – ದಿನೇಶ್ ಗುಂಡೂರಾವ್ ಸೂಚನೆ!
ವ್ಯಕ್ತಿಗೆ ಹೃದಯಾಘಾತದ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿ ನಂತರ ಇಸಿಜಿ ಪರೀಕ್ಷೆಯಲ್ಲಿ ವ್ಯತ್ಯಾಸ ಕಂಡು ಬಂದರೆ ವೈದ್ಯರು ಸುಮಾರು 36 ಸಾವಿರದಿಂದ 40 ಸಾವಿರ ವೆಚ್ಚದ ಈ ಚುಚ್ಚುಮದ್ದನು ನೀಡಲಿದ್ದಾರೆ. ಈ ಚುಚ್ಚುಮದ್ದು ಪಡೆದ 120 ನಿಮಿಷ (2 ಗಂಟೆ)ಗಳವರೆಗೆ ಹೃದಯಾಘಾತವಾಗುವುದನ್ನು ತಡೆಗಟ್ಟುತ್ತದೆ.
ನಂತರದಲ್ಲಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಹೃದಯ ಆಸ್ಪತ್ರೆಗೆ ರೋಗಿಯು ದಾಖಲಾಗಿ ಹೆಚ್ಚಿನ ಪರೀಕ್ಷೆ ಪಡೆಯುವ ಮೂಲಕ ಇನ್ನಷ್ಟು ಹೆಚ್ಚಿನ ಚಿಕಿತ್ಸೆ ಪಡೆಯಬಹುದು ಎಂದು ಎಚ್.ಡಿ.ಕೋಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯ ಡಾ.ಪ್ರಜ್ವಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ಯೋಜನೆಯು ಸರಕಾರಿಆಸ್ಪತ್ರೆಗಳಲ್ಲಿ ಜಾರಿಗೊಳಿಸಲಾಗಿದ್ದು, ಖಾಸಗಿ ಆಸ್ಪತ್ರೆ ಸೇರಿದಂತೆ ಬೇರೆಡೆ ಈ ಚುಚ್ಚುಮದ್ದು ಲಭ್ಯವಿರುವುದಿಲ್ಲ. ಹೆಚ್.ಡಿ.ಕೋಟೆಯ ಸರಕಾರಿ ಆಸ್ಪತ್ರೆಯಲ್ಲಿ ಈ ಯೋಜನೆಯಲ್ಲಿ ಕಳೆದ ಒಂದು ತಿಂಗಳಿನಿಂದ 3 ಚುಚ್ಚುಮದ್ದುಗಳನ್ನು ನೀಡಲಾಗಿದೆ. ಹೃದಯಾಘಾತಕ್ಕೊಳಗಾದ ವ್ಯಕ್ತಿಗಳು ಪ್ರಾಥಮಿಕವಾಗಿ ಈ ಚುಚ್ಚುಮದ್ದು ಪಡೆದು ಹಾಗೂ ಹೆಚ್ಚಿನ ಚಿಕಿತ್ಸೆಯ ನಂತರ ಯಾವುದೇ ತೊಂದರೆಯಿಲ್ಲದೆ ನಿಶ್ಚಿಂತೆಯಿಂದಿದ್ದಾರೆ.