ಹುಬ್ಬಳ್ಳಿ: ಶ್ರೀ ಬಾಲಾಜಿ ನರರೋಗ ಆಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರ ಹಾಗೂ ನವಲಗುಂದದ ಶ್ರೀ ಜಗದ್ಗುರು ಅಜಾತ ನಾಗಲಿಂಗ ಮಹಾಸ್ವಾಮಿ ಮಠ ಇವರ ಸಂಯುಕ್ತಾಶ್ರಯದಲ್ಲಿ ಇದೇ ನ.24ರ ರವಿವಾರದಂದು ಮಠದ ಆವರಣದಲ್ಲಿನ ಶ್ರೀ ನಾಗಲಿಂಗ ಭವನದಲ್ಲಿ “ಉಚಿತ ಆರೋಗ್ಯ ತಪಾಸಣಾ ಶಿಬಿರ” ಹಮ್ಮಿಕೊಳ್ಳಲಾಗಿದೆ
Mandya: ಶಬರಿಮಲೆಗೆ ತೆರಳುತ್ತಿದ್ದ ವಾಹನದ ಆಕ್ಸಲ್ ಕಟ್ ; ಪ್ರಾಣಾಪಾಯದಿಂದ ಪಾರಾದ ಅಯ್ಯಪ್ಪನ ಭಕ್ತರು!
ನವಲಗುಂದದ ಶ್ರೀ ಹಾದಿ ಬಸವೇಶ್ವರ ಸೇವಾ ಸಮಿತಿಯ ಸಹಕಾರದಲ್ಲಿ ಅಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯುವ ಶಿಬಿರದ ದಿವ್ಯಸಾನಿಧ್ಯವನ್ನು ಮಠದ ಗುರುಗಳಾದ ಶ್ರೀ ವೀರೇಂದ್ರ ಮಹಾಸ್ವಾಮಿಗಳು ವಹಿಸಲಿದ್ದು, ಬಾಲಾಜಿ ಆಸ್ಪತ್ರೆ ಚೇರ್ಮನ್ ಡಾ. ಕ್ರಾಂತಿಕಿರಣ ಶಿಬಿರದ ನೇತೃತ್ವ ವಹಿಸಲಿದ್ದಾರೆ.
ಶಿಬಿರದಲ್ಲಿ ನರರೋಗ, ಎಲುಬು-ಕೀಲು, ಹೃದ್ರೋಗಕ್ಕೆ ಸಂಬಂಧಿಸಿದ ಖ್ಯಾತ ವೈದ್ಯರು ತಪಾಸಣೆ ಮಾಡಲಿದ್ದು, ಎಲುಬು ಸಾಂದ್ರತೆ, ರಕ್ತದೊತ್ತಡ, ಮಧುಮೇಹ ತಪಾಸಣೆ ಮಾಡಿ ಉಚಿತ ಸಲಹೆ, ಔಷಧ ನೀಡಲಾಗುವುದು.
ಆಸಕ್ತರು ಶಿಬಿರವನ್ನು ಸದುಪಯೋಗಪಡಿಸಿಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗೆ 8123350860, 9019718892 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.