ರಾಮನಗರ:- ಮಹಿಳೆಯರಿಗೆ ಉಚಿತ ಬಸ್ ಟಿಕೆಟ್ ಕೊಟ್ಟಿರೋದ್ರಿಂದ ನಷ್ಟವಾಗಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
Bigg Boss winner: ಸರ್, ದೇವರಾಣೆ ಗೆಲ್ತೀನಿ ಎಂದುಕೊಂಡಿರಲಿಲ್ಲ: ಹನುಮಂತ!
ಈ ಸಂಬಂಧ ಮಾತನಾಡಿದ ಅವರು, ಹೆಂಗಸರಿಗೆ ಉಚಿತ ಬಸ್ ಟಿಕೆಟ್ ಕೊಟ್ಟಿರೋದ್ರಿಂದ ನಷ್ಟವಾಗಿಲ್ಲ. ಶಕ್ತಿ ಯೋಜನೆಯಿಂದ ಯಾವುದೇ ನಷ್ಟವಾಗಿಲ್ಲ. ಶಕ್ತಿ ಯೋಜನೆಯಿಂದ ಬರಬೇಕಾದ ಹಣ ಸಾರಿಗೆ ಇಲಾಖೆಗೆ ಬಂದಿದೆ. 8.8 ಕೋಟಿಗೂ ಹೆಚ್ಚು ಹಣ ಸಾರಿಗೆ ಇಲಾಖೆಗೆ ಬಂದಿದೆ. ಕೆಎಸ್ಆರ್ಟಿಸಿಯಲ್ಲಿ ಬಿಜೆಪಿ ಸರ್ಕಾರ ಇದ್ದಾಗ 5,900 ಕೋಟಿ ಸಾಲ ಇತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ 10 ಸಾವಿರ ಮಂದಿಯನ್ನು ಕೆಎಸ್ಆರ್ಟಿಸಿಗೆ ನೇಮಕ ಮಾಡಿಕೊಂಡಿದ್ದೇವೆ ಎಂದರು.
ಈಗಾಗಲೇ ಡಿ.ಕೆ. ಶಿವಕುಮಾರ್ ಹಾಗೂ ಸುರೇಶ್ ಜಿಲ್ಲೆಯನ್ನ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ರಾಮನಗರ ಜಿಲ್ಲೆಗೆ ಈ ಬಾರಿಯ ಬಜೆಟ್ನಲ್ಲಿ ಹೆಚ್ಚಿನ ಅನುದಾನಕ್ಕೆ ಮನವಿ ಮಾಡಿದ್ದೇವೆ. ಜಿಲ್ಲೆಗೆ ಆಗಬೇಕಿರುವ ಅಭಿವೃದ್ಧಿ ಪಟ್ಟಿಯನ್ನು ಡಿಸಿ ಅವರು ನೀಡುತ್ತಾರೆ. ಫೆ. 4 ರಂದು ಪ್ರಗತಿ ಪರಿಶೀಲನಾ ಸಭೆ ಕರೆದಿದ್ದೇನೆ. ಅಧಿಕಾರಿಗಳಿಂದ ಮಾಹಿತಿ ಪಡೆದು ಸಿಎಂ ಬಳಿ ಮಾತನಾಡುತ್ತೇನೆ ಎಂದು ಮಾಹಿತಿ ಕೊಟ್ಟಿದ್ದಾರೆ.