ಬೆಂಗಳೂರು:- ದುಬಾರಿ ಬಟ್ಟೆಗಳನ್ನು ಖರೀದಿಸಿ ಬಳಿಕ ಹಣ ಕೊಡದೇ ಐಷಾರಾಮಿ ಬಟ್ಟೆ ಅಂಗಡಿಗಳಿಗೆ ವಂಚನೆ ಮಾಡುತ್ತಿದ್ದ ಐನಾತಿ ಯುವತಿಯನ್ನು ಅರೆಸ್ಟ್ ಮಾಡಲಾಗಿದೆ.
ಐಷಾರಾಮಿ ಬಟ್ಟೆ ಶೋರೂಂಗಳಿಗೆ ಹೋಗಿ ದುಬಾರಿ ಬೆಲೆಯ ಬಟ್ಟೆಗಳನ್ನ ಖರೀದಿಸಿ ಆನ್ಲೈನ್ ಪೇಮೆಂಟ್ ಮಾಡುವಂತೆ ನಟಿಸಿ ವಂಚಿಸುತ್ತಿದ್ದ ಐನಾತಿ ಯುವತಿಯನ್ನ ಪೊಲೀಸರು ಬಂಧಿಸಿದ್ದಾರೆ.
ಕುಮಾರಸ್ವಾಮಿ ಹೇಳೋದೆಲ್ಲಾ ಬರೀ ಸುಳ್ಳು: ಸಚಿವರ ಮೇಲಿನ ಹಲ್ಲೆ ಆರೋಪಕ್ಕೆ ಡಿಕೆಶಿ ಕೌಂಟರ್!
ರಶ್ಮಿ ಬಂಧಿತ ಆರೋಪಿ. ಆರೋಪಿ ವೃತ್ತಿಯಲ್ಲಿ ಚಾರ್ಟೆರ್ಡ್ ಅಕೌಂಟೆAಟ್ ಆಗಿ ಕೆಲಸ ಮಾಡಿಕೊಂಡಿದ್ದರು. 30, 40 ಸಾವಿರದ ದುಬಾರಿ ಬೆಲೆಯ ಬಟ್ಟೆಗಳನ್ನ ಖರೀದಿ ಮಾಡಿ ಬಳಿಕ ಪೋನ್ ಪೇ, ಗೂಗಲ್ ಪೇ ಮುಖಾಂತರ ಹಣ ಕಳಿಸಿದ್ದೀನಿ ಎಂದು ಹೇಳಿ ಹೆಸರು, ನಂಬರ್ ಅಂಗಡಿ ಮಾಲೀಕರಿಗೆ ಕೊಟ್ಟು ಅಲ್ಲಿಂದ ತೆರಳ್ತಾ ಇದ್ದರು.
ಆನ್ಲೈನ್ ಮುಖಾಂತರ ಬಟ್ಟೆ ಶೋರೂಂಗಳ ಮಾಲೀಕರಿಗೆ ಹಣ ಬರದೆ ಇದ್ದಾಗ ಆರೋಪಿ ಕಾಲ್ ಮಾಡಿದರೆ, ಕರೆ ಸ್ವೀಕರಿಸುತ್ತಿರಲಿಲ್ಲ. ಅಂಗಡಿ ಮಾಲೀಕರಿಗೆ ನಂಬರ್ ಕೂಡುವಾಗ ಆರೋಪಿ ಯುವತಿ ಬೇರೊಬ್ಬರ ಪೋನ್ ನಂಬರ್ ಕೊಟ್ಟು ಹೋಗಿದ್ದ ಪ್ರಸಂಗಗಳೂ ನಡೆದಿವೆ. ಶೋರೂಂ ಮಾಲೀಕರು ಕಾಲ್ ಮಾಡಿ ವಿಚಾರಿಸಿದಾಗ ರಾಂಗ್ ನಂಬರ್ ಅನ್ನೋದು ಖಾತರಿ ಆಗುತ್ತಿತ್ತು.
ಇತ್ತೀಚಿಗೆ ಆರೋಪಿತ ಯುವತಿ ಸದಾಶಿವ ನಗರದ ಪ್ರತಿಷ್ಠಿತ ಬಟ್ಟೆ ಶೋರೂಂಗೆ ಹೋಗಿ ಬಟ್ಟೆ ಖರೀದಿ ಮಾಡಿ ಹಣಕ್ಕೆ ಆನ್ಲೈನ್ ಮೂಲಕ ಕಳಿಸಿರೋದಾಗಿ ಹೇಳಿ ವಂಚನೆ ಮಾಡಿ ಹೋಗಿರುತ್ತಾಳೆ. ಶೋರೂಂನವರು ಯುವತಿ ಮೇಲೆ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ