ಬೆಂಗಳೂರು:- ಎಟಿಎಂಗಳಲ್ಲಿ ವೃದ್ಧರನ್ನ ಟಾರ್ಗೆಟ್ ಮಾಡಿ ವಂಚಿಸುವ ಗ್ಯಾಂಗ್ ಅನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಮೈಸೂರು : ಚಾಮುಂಡಿ ಬೆಟ್ಟದಲ್ಲಿ ಬೆಂಕಿ: ಹತ್ತಾರು ಎಕರೆ ಅಗ್ನಿಗಾಹುತಿ!
ಆರೋಪಿಗಳು, ನಿರ್ಜನ ಪ್ರದೇಶಗಳಲ್ಲಿರೋ ಎಟಿಎಂಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. ಹಣ ಪಡೆಯಲು ಬಂದ ವೃದ್ದರನ್ನ ಪರಿಚಯ ಮಾಡ್ಕೊತ್ತಿದ್ರು. ಬಳಿಕ ಅಸಲಿ ಎಟಿಎಂ ಪಡೆದು ಅವರಿಗೆ ಗೊತ್ತಾಗದ ಹಾಗೆ ನಕಲಿ ಕಾರ್ಡ್ ಹಾಕ್ತಿದ್ರು. ಪಾಸ್ ವರ್ಡ್ ಪಡೆದು ಹಣ ಡ್ರಾ ಮಾಡೋ ತರ ನಾಟಕ ಆಡುತ್ತಿದ್ದರು. ಆದರೆ ಹಣ ಬರೋದಿಲ್ಲ ಸಮಸ್ಯೆ ಅಂತ ಹೇಳ್ತಿದ್ರು.
ಬಳಿಕ ಅಸಲಿ ಎಟಿಎಂ ಕಾರ್ಡ್ ಬಳಸಿ ಹಣ ಡ್ರಾ ಮಾಡ್ತಿದ್ರು. ಅಷ್ಟಲ್ಲದೇ ಹಣ ಬರೋ ಜಾಗದಲ್ಲಿ ಯಾವ್ದಾದ್ರು ವಸ್ತುವನ್ನ ಅಡ್ಡವಾಗಿ ಇಡ್ತಿದ್ರು. ಹಣ ಬರಲ್ಲ ಅಂತ ವೃದ್ದರು ಹೋದ ಬಳಿಕ, ಆರೋಪಿಗಳೂ,ಆ ಹಣ ಪಡೆಯುತ್ತಿದ್ದರು. ಆರೋಪಿಗಳು ಮಾಡಿರೋ ವಂಚನೆಗಳಲ್ಲಿ ಅತೀ ಹೆಚ್ಚು ಕೆನರಾ ಬ್ಯಾಂಕ್ ಎಟಿಎಂಗಳೇ. ಬಂಧಿತರನ್ನು ಉತ್ತರ ಭಾರತ ಮೂಲದ ನಯಾಝ್, ಸುದಾಂಶು, ರಜೀಬ್ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಲ್ಲಿ ಸುದಾಂಶು ಮತ್ತು ರಜೀಭ್ ರಾಯಲ್ ಲೈಫ್ ಲೀಡ್ ಮಾಡ್ತಿದ್ರು. ಇಬ್ಬರೂ ಪತ್ನಿಯನ್ನ ಫ್ಲೈಟ್ ನಲ್ಲಿ ಕರೆದುಕೊಂಡು ಹೋಗಿ ಜಾಲಿ ಟ್ರಿಪ್ ಮಾಡಿದ್ರು. ಸದ್ಯ ಪುಲಕೇಶಿ ನಗರ ಪೊಲೀಸರಿಂದ ಆರೋಪಿಗಳ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗಿದೆ.