ನವದೆಹಲಿ: ನಕಲಿ ಷೇರು ಮಾರುಕಟ್ಟೆ ವೆಬ್ಸೈಟ್ ಮಾಡಿಕೊಂಡು ಜನರಿಗೆ ವಂಚಿಸುತ್ತಿದ್ದ 8 ಸೈಬರ್ ವಂಚಕರನ್ನು ರಾಜಸ್ಥಾನ ಮತ್ತು ಗುಜರಾತ್ನ ವಿವಿಧ ಸ್ಥಳಗಳಿಂದ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ನಕಲಿ ಷೇರು ಮಾರುಕಟ್ಟೆ ವೆಬ್ಸೈಟ್ ಮಾಡಿಕೊಂಡು ಹೂಡಿಕೆ ಮಾಡುವಂತೆ ಜನರಿಗೆ ಆಮಿಷ ಒಡ್ಡುತ್ತಿದ್ದರು. ಇಷ್ಟೇ ಅಲ್ಲದೇ ಅರೆಕಾಲಿಕ ಕೆಲಸದ ಅವಕಾಶ ನೀಡುವುದಾಗಿ ಹೇಳಿ ಜನರಿಗೆ ವಂಚಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ದೆಹಲಿ ಪೊಲೀಸರು ವಿಶೇಷ ತನಿಖಾ ತಂಡಗಳನ್ನು ರಚಿಸಿ ತಾಂತ್ರಿಕ ಡೇಟಾವನ್ನು ಪರಿಶೀಲಿಸಿ ಆರೋಪಿಗಳನ್ನು ಬಂದಿಸಿದ್ದಾರೆ. ಗುಪ್ತಚರ ಮಾಹಿತಿ ಆಧಾರದ ಮೇಲೆ ಆರೋಪಿಗಳನ್ನು ಅಲ್ವಾರ್, ಜೈಪುರ ಮತ್ತು ರಾಜಸ್ಥಾನದ ಭರತ್ಪುರ ಮತ್ತು ಗುಜರಾತ್ನ ವಡೋದರಾದಲ್ಲಿ ಬಂದಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳಿಂದ 8 ಮೊಬೈಲ್ ಫೋನ್ಗಳು, 8 ಸಿಮ್ ಕಾರ್ಡ್ಗಳು ಮತ್ತು ವಂಚನೆಗೆ ಸಂಬಂಧಿಸಿದ ಸುಮಾರು 2.5 ಕೋಟಿ ರೂ. ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.