ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರ ಹೆಸರು, ಪದನಾಮ ಹಾಗೂ ಭಾವಚಿತ್ರವನ್ನು ಅಪರಿಚಿತ ದೂರವಾಣಿ ಸಂಖ್ಯೆ: 9428053334 ಯಿಂದ ವ್ಯಾಟ್ಸಪ್ ಮೂಲಕ ಅಧಿಕಾರಿಗಳಿಗೆ ಸಂದೇಶಗಳನ್ನು ರವಾನಿಸಲಾಗುತ್ತಿದೆ.
Aadhar Card ಬಳಕೆದಾರರಿಗೆ ಎಚ್ಚರಿಕೆ ನೀಡಿದ UIDAI.! ʻಆಧಾರ್ʼ ದುರ್ಬಳಕೆ ಮಾಡಿದ್ರೆ ಕಾದಿದೆ ಕಠಿಣ ಶಿಕ್ಷೆ
ಅನಧಿಕೃತವಾಗಿ ಮುಖ್ಯ ಆಯುಕ್ತರ ಹೆಸರು, ಪದನಾಮ ಹಾಗೂ ಭಾವಚಿತ್ರವನ್ನು ದುರುಪಯೋಗ ಪಡಿಸಿಕೊಂಡು ಅಧಿಕಾರಿಗಳಿಗೆ ತಪ್ಪು ಮಾಹಿತಿ ರವಾನೆಯಾಗುತ್ತಿರುತ್ತದೆ. ಈ ನಿಟ್ಟಿನಲ್ಲಿ ಪಾಲಿಕೆ ಮಾಹಿತಿ ತಂತ್ರಜ್ಞಾನ ವಿಭಾಗದ ಉಪ ಮುಖ್ಯ ಮಾಹಿತಿ ಅಧಿಕಾರಿಯಾದ ಶ್ರೀ ಪ್ರಭಾಕರ್ ರವರು ತಕ್ಷಣ ಸೈಬರ್ ಕ್ರೈಮ್ನಲ್ಲಿ ದೂರು ದಾಖಲಿಸಿದ್ದಾರೆ.(ಎಫ್.ಐ.ಆರ್ ಹಾಗೂ ದೂರು ಪ್ರತಿ ಲಗತ್ತಿಸಿದೆ.
ಮುಂದುವರಿದು, ಪಾಲಿಕೆಯ ಅಧಿಕಾರಿಗಳು ಅಥವಾ ನಾಗರೀಕರು 9428053334 ಸಂಖ್ಯೆಯಿಂದ ವ್ಯಾಟ್ಸಪ್ ಮೂಲಕ ಬರುವ ಸಂದೇಶಗಳಿಗೆ ಸ್ಪಂದಿಸದಂತೆ ಮುಖ್ಯ ಆಯುಕ್ತರು ಕೋರಿರುತ್ತಾರೆ. ಈ ರೀತಿಯ ಸಂದೇಶಗಳು ಯಾರಿಗಾದರೂ ಬಂದಲ್ಲಿ ಅಥವಾ ಯಾವುದೇ ಅನುಮಾನಗಳಿದ್ದಲ್ಲಿ ಕೂಡಲೆ ಮುಖ್ಯ ಆಯುಕ್ತರ ಕಛೇರಿಗೆ ವರದಿ ಮಾಡುವಂತೆ ಅಥವಾ ಸೈಬರ್ ಕ್ರೈಮ್ಗೆ ದೂರು ನೀಡುವಂತೆ ವಿನಂತಿಸಿದೆ.
ಸಂಪರ್ಕಕ್ಕಾಗಿ:
ಬಿಬಿಎಂಪಿ ಸಹಾಯವಾಣಿ ಸಂಖ್ಯೆ: 1533/080-22660000
ಮುಖ್ಯ ಆಯುಕ್ತರ ಕಛೇರಿ ಸಂಖ್ಯೆ: 080-22221286/22975550
ಮುಖ್ಯ ಆಯುಕ್ತರ ಕಛೇರಿಯ ಇ-ಮೇಲ್ ಐಡಿ: [email protected]
ಸೈಬರ್ ಕ್ರೈಮ್ ಟೋಲ್ ಫ್ರೀ ಸಂಖ್ಯೆ: 100/1930/080-22942222
![](https://ainlivenews.com/wp-content/uploads/2024/01/Ad-Banner-copy-scaled.jpg)