ಚಾಮರಾಜನಗರ:– ಸ್ನೇಹಮಯಿ ಕೃಷ್ಣ ವಿರುದ್ಧ ವಂಚನೆ ಕೇಸ್ ಗೆ ಸಂಬಂಧಿಸಿದಂತೆ RTI ಕಾರ್ಯಕರ್ತ ಸ್ಪಷ್ಟನೆ ಕೊಟ್ಟಿದ್ದಾರೆ.
ದಯವಿಟ್ಟು ಬಿಟ್ಟು ಹೋಗ್ಬೇಡಿ ಸರ್: ನೆಚ್ಚಿನ ಶಿಕ್ಷಕನ ವರ್ಗಾವಣೆಗೆ ಬಿಕ್ಕಿಬಿಕ್ಕಿ ಅತ್ತ ಮಕ್ಕಳು!
ತಮ್ಮ ವಿರುದ್ಧದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರದಲ್ಲಿ ಸ್ನೇಹಮಯಿ ಕೃಷ್ಣ ಮಾತನಾಡಿ, ಕರುಣಾಕರ ಎಂಬುವರು ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ.
ಕರುಣಾಕರ ಅವರ ಬಳಿ 50 ಸಾವಿರ ರೂ. ಸಾಲ ಪಡೆದಿರುವುದು ನಿಜ. 3 ಲಕ್ಷ ಸಾಲ ಕೊಡಿಸೋದಾಗಿ ಪ್ರಾಮಿಸರಿ ನೋಟ್ ಬರೆಸಿಕೊಂಡಿದ್ದರು. ಪ್ರತಿ ತಿಂಗಳು 50 ಸಾವಿರಕ್ಕೆ ಬಡ್ಡಿ ಕೊಡುತ್ತಾ ಬಂದಿದ್ದೇನೆ. ಈಗ ನ್ಯಾಯಾಧೀಶರು 50 ಸಾವಿರಕ್ಕೆ ಎಷ್ಟು ಸೇರಿಸಿ ಕೊಡ್ತಿರಾ ಅಂತ ಕೇಳಿದರು. 25 ಸಾವಿರ ಸೇರಿಸಿ 75 ಸಾವಿರ ಕೊಡಲು ಒಪ್ಪಿದ್ದೇನೆ ಎಂದಿದ್ದಾರೆ.
ಅಲ್ಲದೇ ಕರುಣಾಕರ 3 ಲಕ್ಷ ರೂ. ಎಲ್ಲಿ ಕೊಟ್ಟರು ಎಂದು ಪ್ರಶ್ನಿಸಿದ್ದೇನೆ. ಶೀಘ್ರದಲ್ಲೇ ನಿಜಾಂಶ ಗೊತ್ತಾಗಲಿದೆ. ನನ್ನ ವಿರುದ್ಧ ಮೊದಲಿನಿಂದಲೂ ಸಂಚು ನಡೆಯುತ್ತಿದೆ. ನನ್ನ ನೈತಿಕ ಶಕ್ತಿ ಕುಗ್ಗಿಸುವ ಯತ್ನ ನಡೆಯುತ್ತಿದೆ. ನನ್ನ ವಿರುದ್ಧ 22 ಪ್ರಕರಣ ದಾಖಲಾಗಿವೆ. 9 ಪ್ರಕರಣ ಬೋಗಸ್ ಅಂತ ಆಗಿದೆ. 8 ಪ್ರಕರಣಗಳಲ್ಲಿ ನಾನು ನಿರಪರಾಧಿ ಅಂತ ಸಾಬೀತಾಗಿದೆ. 3 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ ಎಂದರು.