ಚಿಕ್ಕಬಳ್ಳಾಪುರ:- ಡೈರಿ ಸಿಬ್ಬಂದಿಯೇ ಶುದ್ಧ ಹಾಲಿಗೆ ನೀರು ಬೆರಸಿ ವಂಚನೆ ಮಾಡಿರುವ ಪ್ರಕರಣ ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ.
ಮೆಟ್ರೋ ಪ್ರಯಾಣಿಕರೇ ಇಲ್ಲಿ ಕೇಳಿ: ಈ ದಿನದಂದು ನೇರಳೆ ಮಾರ್ಗದ ಸಂಚಾರದಲ್ಲಿ ವ್ಯತ್ಯಯ!
ತಾಲೂಕಿನ ಮಾಡಿಕೆರೆ ಹಾಲಿನ ಡೈರಿ ಬಿಎಂಸಿ ಕೇಂದ್ರದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಅಂದಹಾಗೆ ಮಾಡಿಕೆರೆ ಹಾಲಿನ ಡೈರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಲಿನ ಡಂಪ್ ಟ್ಯಾಂಕ್ಗೆ ನೀರು ಕಲಬೆರಕೆ ಮಾಡಿ, ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತದ ಮೆಗಾ ಡೈರಿಗೆ ಸರಬರಾಜು ಮಾಡಿ ಈಗ ಸಿಕ್ಕಿ ಬಿದ್ದಿದ್ದಾರೆ.
ಹಾಲಿನ ಡೈರಿ ಬಿಎಂಸಿ ಕೇಂದ್ರದಲ್ಲಿ ನಡೆದಿದೆ ಎನ್ನಲಾದ ಹಾಲಿನ ಮಿಶ್ರಣ ಅಕ್ರಮ ವಿಚಾರ ಬಯಲಾಗ್ತಿದ್ದಂತೆ ಸ್ವತಃ ಚಿಮುಲ್ ಎಂ.ಡಿ ಶ್ರೀನಿವಾಸಗೌಡ ಅಲರ್ಟ್ ಆಗಿದ್ದಾರೆ. ಡೈರಿಯ ಸಹಾಯಕ ಚೇತನ್ನನ್ನ ಕೆಲಸದಿಂದ ವಜಾ ಮಾಡಿದ್ದಾರೆ.