ಪ್ಯಾರಿಸ್ : ಫ್ರಾನ್ಸ್ ನಲ್ಲಿ ಎದುರಾಗಿರುವಾಗ ರಾಜಕೀಯ ಬಿಕ್ಕಟ್ಟನ್ನು ಸರಿದೂಗಿಸುವ ಹೊಣೆಯನ್ನು ತನ್ನ ಆಪ್ತನಿಗೆ ಇಮ್ಯಾನ್ಯುವೆಲ್ ಮ್ಯಾಕ್ರೋನ್ ಹೊರಿಸಿದ್ದಾರೆ. ಫ್ರಾನ್ಸ್ ನ ನೂತನ ಪ್ರಧಾನ ಮಂತ್ರಿಯಾಗಿ ಫ್ರಾಂಕೋಯಿಸ್ ಬೇರೋ ಅವರನ್ನು ಆಯ್ಕೆ ಮಾಡಲಾಗಿದೆ.
ಇದರೊಂದಿಗೆ 2024ರಲ್ಲಿ ಫ್ರಾನ್ಸ್ ಮೂವರು ಪ್ರಧಾನಿಗಳಡಿ ಕಾರ್ಯ ನಿರ್ವಹಿಸಿದಂತಾಗುತ್ತದೆ. 9 ದಿನಗಳ ಹಿಂದೆ ಫ್ರಾನ್ಸ್ ಸಂಸತ್ತು ಐತಿಹಾಸಿಕ ಅವಿಶ್ವಾಸ ನಿರ್ಣಯದ ಮೂಲಕ ಮೈಕೆಲ್ ಬಾರ್ನಿಯರ್ ಸರಕಾರವನ್ನು ಪದಚ್ಯುತಗೊಳಿಸಿದ ಬಳಿಕ, ಮ್ಯಾಕ್ರೋನ್ ಪಕ್ಷದ ಮಿತ್ರಪಕ್ಷ ಮೊಡೆಮ್ ಗ್ರೂಫ್ನ ಮುಖ್ಯಸ್ಥ 73 ವರ್ಷದ ಫ್ರಾಂಕೋಯಿಸ್ ಬೇರೊ ಪ್ರಧಾನಿಯಾಗಿ ಆಯ್ಕೆಗೊಂಡಿದ್ದಾರೆ.
ದಶಕಗಳಿಂದಲೂ ಫ್ರೆಂಚ್ ರಾಜಕಾರಣದಲ್ಲಿ ಖ್ಯಾತಿ ಘಳಿಸಿರುವ ಬೈರೂ ಮ್ರಾಕ್ರನ್ ಅವರ ಮೃತ್ರಿಕೂಟದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಬೈರೂ ನೂತನ ಸರ್ಕಾರ ರಚಿಸಲಿದ್ದಾರೆ ಎಂದು ಮ್ಯಾಕ್ರನ್ ಅವರ ಕಚೇರಿಯೂ ಪ್ರಕಟಣೆಯಲ್ಲಿ ತಿಳಿಸಿದೆ.