ಬೆಳಗಾವಿ : ಮಹಾ ಕುಂಭಮೇಳದ ಅಮೃತ್ನಸಾನದ ವೇಳೆ ನಡೆದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದ ನಾಲ್ವರ ಶವ ಇಂದ ಬೆಳಗಾವಿಗೆ ಬರಲಿದೆ. ಪ್ರಯಾಗ್ರಾಜ್ನಿಂದ ಕಳೆದ ಬುಧವಾರದ ರಾತ್ರಿಯೇ ಆಂಬುಲೆನ್ಸ್ ಮೂಲಕ ಶವಗಳನ್ನ ತರಲಾಗ್ತಿದ್ದು, ಬೆಳಗ್ಗೆ ದೆಹಲಿ ತಲುಪಲಿದೆ. ಮಧ್ಯಾಹ್ನ 3:30ಕ್ಕೆ ದೆಹಲಿಯಿಂದ ಹೊರಟ, ವಿಮಾನವು ಸಂಜೆ 5:30ಕ್ಕೆ ಬೆಳಗಾವಿಗೆ ಬರಲಿದೆ.
ಮೌನಿ ಅಮಾವಾಸ್ಯೆಯ ಹಿನ್ನೆಲೆ ಅಮೃತಸ್ನಾನದ ವೇಳೆ ಜನಸಂದಣಿ ದಟ್ಟವಾಗಿ ನಡೆದ ಕಾಲ್ತುಳಿತದಲ್ಲಿ ಜ್ಯೋತಿ ಹತ್ತರವಾಠ (44) ಮತ್ತು ಮಗಳು ಮೇಘಾ ಹತ್ತರವಾಠ(24) ಅರುಣ್ ಕೋಪರ್ಡೆ(61), ಶಿವಾಜಿನಗರದ ಮಹಾದೇವಿ ಬಾವನೂರ(48) ಮೃತಪಟ್ಟಿದ್ದರು. ಬೆಳಗಾವಿ ಡಿಸಿ ಮೊಹಮ್ಮದ್ ಅವರು ಶವಗಳನ್ನು ನಗರಕ್ಕೆ ತರಲು ಇಬ್ಬರು ವಿಶೇಷ ಅಧಿಕಾರಿಗಳನ್ನು ದೆಹಲಿಗೆ ಕಳುಹಿಸಿದ್ದಾರೆ. ಕಾಲ್ತುಳಿತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಈ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಅರುಣ್ ಪತ್ನಿಯೂ ಗಾಯಗೊಂಡಿದ್ದಾರೆ.