ಬೆಂಗಳೂರು: ಕರ್ನಾಟಕ ಕಾಂಗ್ರೆಸ್ನಲ್ಲಿ ಆಂತರಿಕ ಸಂಘರ್ಷ ಹೆಚ್ಚಾಗತೊಡಗಿದೆ. ಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಇದಕ್ಕೆ ಪುಷ್ಟಿ ನೀಡಿವೆ. ಹೌದು ವಿಧಾನಸೌಧದ ಗೃಹ ಸಚಿವರ ಕೊಠಡಿಯಲ್ಲಿ ಸಚಿವರಾದ ಡಾ.ಜಿ ಪರಮೇಶ್ವರ್, ಹೆಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ ಮೀಟಿಂಗ್ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ನಲ್ಲಿ ಮತ್ತೆ ನಾಲ್ವರು ಸಚಿವರು ಸಂಚಲನ ಸೃಷ್ಟಿಸಿದ್ದಾರೆ.
ಸಿಎಂ ಗಾದಿ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಇತ್ತೀಚೆಗೆ ಔತಣಕೂಟಕ್ಕೆ ಬ್ರೇಕ್ ಹಾಕಿದ್ದಕ್ಕೆ ಸಚಿವರು ಬೇಸರ ವ್ಯಕ್ತಪಡಿಸಿದ್ದರು. ಡಿನ್ನರ್ಗೆ ವರಿಷ್ಠರು ಬ್ರೇಕ್ ಹಾಕಿದ್ದಕ್ಕೆ ಸಚಿವ ಪರಂ ಮತ್ತು ಆಪ್ತ ಸಚಿವರು ಅಸಮಾಧಾನಗೊಂಡಿದ್ದರು. ಈಗ ಮತ್ತೆ ಒಂದೆಡೆ ಸೇರಿ ಸಚಿವರು ಸಭೆ ನಡೆಸಿದ್ದರಿಂದ ಕುತೂಹಲ ಹೆಚ್ಚಾಗಿದೆ.