ಬೆಂಗಳೂರು: ಟ್ರಕ್, ಇನ್ನೋವಾ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಲಹಂಕ ಪೊಲೀಸರು ಯಶಸ್ವಿಯಾಗಿದ್ದಾರೆ. ನ್ಯೂಇಯರ್ ಗೆ ಕಿಕ್ಕೇರಿಸಲು ಟ್ರಕ್, ಇನ್ನೋವಾ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದರು. ಹೊಸ ವರ್ಷದ ಸಂದರ್ಭದಲ್ಲಿ ಹೆಚ್ಚು ಬೆಲೆಗೆ ಗಾಂಜಾ ಮಾರಾಟ ಮಾಡಲು ಪ್ಲಾನ್ ಮಾಡಿದ್ದ ಆರೋಪಿಗಳು,
Drumstick Tea Health Benefits: ನುಗ್ಗೆಸೊಪ್ಪಿನ ಚಹಾ ಕುಡಿಯೋದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ..?
ನಿಟ್ಟೆ ಮೀನಾಕ್ಷಿ ಕಾಲೇಜು ಕಡೆಗೆ ಹೋಗುವ ರಸ್ತೆಯಲ್ಲಿ ಗಾಂಜಾ ಇದ್ದ ಟ್ರಕ್ ನಿಲ್ಲಿಸಿಕೊಂಡು ನಿಂತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಯಲಹಂಕ ಪೊಲೀಸರು ಬಂಧಿತರಿಂದ 74 ಲಕ್ಷ ಮೌಲ್ಯದ 93 ಕೆಜಿ ಸೇರಿ 1 ಟ್ರಕ್, ಇನ್ನೋವಾ ಕಾರು, 4 ಮೊಬೈಲ್ ಸೀಜ್ ಮಾಡಿ ಪ್ರಕರಣ ದಾಖಲು ಮಾಡಿದ್ದಾರೆ.