ಭಾರತದ ಪರ ಆರಂಭಿಕ ಕೆಲ ಪಂದ್ಯಗಳಲ್ಲಿ ಬೆಂಚ್ ಕಾದಿದ್ದರೂ ಹಾರ್ದಿಕ್ ಪಾಂಡ್ಯ ಗಾಯಕ್ಕೆ ತುತ್ತಾದ ಬಳಿಕ ಪ್ಲೇಯಿಂಗ್ ಇಲೆವೆನ್ಗೆ ಬಂದಿದ್ದ ಅವರು ಆಡಿದ್ದ ಕೇವಲ 7 ಪಂಂದ್ಯಗಳಿಂದ 24 ವಿಕೆಟ್ಗಳನ್ನು ಕಬಳಿಸಿದ್ದರು. ಆ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ಗಳನ್ನು ಪಡೆದ ಬೌಲರ್ ಎನಿಸಿಕೊಂಡಿದ್ದರು.
ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ನಲ್ಲಿ ಮೊಹಮ್ಮದ್ ಶಮಿ ಅವರು 57 ರನ್ಗಳಿಗೆ 7 ವಿಕೆಟ್ ಪಡೆದಿದ್ದು ಇವರ ಅತ್ಯುತ್ತಮ ಬೌಲಿಂಗ್ ಸಾಧನೆಯಾಗಿದೆ. ಅಲ್ಲದೆ ಏಕದಿನ ವಿಶ್ವಕಪ್ ಇತಿಹಾಸದಲ್ಲಿಯೇ ಅತ್ಯುತ್ತಮ ಬೌಲಿಂಗ್ ಸ್ಪೆಲ್ ಇದಾಗಿದೆ. ಇದರ ಜೊತೆಗೆ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಮೊಹಮ್ಮದ್ ಶಮಿ ಅವರು 50 ವಿಕೆಟ್ಗಳನ್ನು ದಾಖಲಿಸಿದ್ದಾರೆ. ಕೇವಲ 17 ಇನಿಂಗ್ಸ್ಗಳಲ್ಲಿ ಇವರು ಈ ಸಾಧನೆ ಮಾಡಿದ್ದಾರೆ.
ಏಕದಿನ ವಿಶ್ವಕಪ್ ಟೂರ್ನಿಯ ವೇಳೆ ಪಾದದ ಗಾಯಕ್ಕೆ ತುತ್ತಾಗಿದ್ದ ಮೊಹಮ್ಮದ್ ಶಮಿ ಅವರು ಅಂದಿನಿಂದ ಇಲ್ಲಿಯವರೆಗೂ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ದೂರ ಉಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದರು ಹಾಗೂ ಇಂಗ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೂ ಕೂಡ ಅಲಭ್ಯರಾಗಿದ್ದಾರೆ.
ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಟಿ20 ವಿಶ್ವಕಪ್ನಲ್ಲಿ ಆಡುವುದು ಪಕ್ಕಾ ಎಂದು ನನಗೆ ಅನಿಸುತ್ತಿದೆ. ಇವರ ಬಳಿಕ ಅರ್ಷದೀಪ್ ಸಿಂಗ್ ಕೂಡ ಆಡಬಹುದು ಏಕೆಂದರೆ ಇವರ ಬೌಲಿಂಗ್ನಲ್ಲಿ ಸ್ವಲ್ಪ ಸ್ವಿಂಗ್ ಇದೆ ಹಾಗೂ ಸ್ವಲ್ಪ ಯಾರ್ಕರ್ಗಳನ್ನು ಹಾಕುತ್ತಾರೆ. ಇದು ಇವರಿಗೆ ಪ್ಲಸ್ ಪಾಯಿಂಟ್,” ಎಂದು ಜಹೀರ್ ಖಾನ್ ತಿಳಿಸಿದ್ದಾರೆ.