ಮಂಡ್ಯ: ಬಿಜೆಪಿ-ಜೆಡಿಎಸ್ ಪಕ್ಷಗಳ ಮೈತ್ರಿ ಹಿನ್ನಲೆಯಲ್ಲಿ ಪಕ್ಷಾಂತರ ಆಲೋಚನೆಯಿಂದ ಹಿಂದೆ ಸರಿದ್ರಾ ಮಂಡ್ಯದ ಮಾಜಿ ಶಾಸಕರು!?. ಮೈತ್ರಿ ಬೆನ್ನಲ್ಲೆ ಕೃಷಿ ಸಚಿವರಿಗೆ ಕೈ ಕೊಟ್ರಾ ಅನ್ಯ ಪಕ್ಷದ ನಾಯಕರು.?
ಮುಂದಿನ ದಿನದಲ್ಲಿ ಜಿಲ್ಲೆಯ ಜೆಡಿಎಸ್ ನ ಮಾಜಿ ಸಚಿವರು, ಮಾಜಿ ಶಾಸಕರು ಕಾಂಗ್ರೆಸ್ ಸೇರ್ತಾರೆ ಶೀಘ್ರ ಅದರ ಬಗ್ಗೆ ಮಾಹಿತಿ ಕೊಡ್ತೇನೆ ಎಂದಿದ್ದ ಸಚಿವ ಚಲುವರಾಯಸ್ವಾಮಿ. ಸಚಿವರ ಹೇಳಿಕೆಯಿಂದ ಚರ್ಚೆಗೆ ಕಾರಣವಾಗಿದ್ದ ಮಾಜಿ ಸಚಿವ ಪುಟ್ಟರಾಜು ಪಕ್ಷ ಹಾಗೂ ನಾಯಕರಿಂದ ಅಂತರ ಕಾಯ್ದುಕೊಂಡಿದ್ದ ಪುಟ್ಟರಾಜು ಅದೇ ಹಿನ್ನಲೆ ಶುರುವಾಗಿತ್ತು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರೋದು ಫಿಕ್ಸ್ ಅನ್ನೋ ಮಾತು.
ಆದ್ರೆ ಬಿಜೆಪಿ-ಜೆಡಿಎಸ್ ಮೈತ್ರಿ ಖಚಿತವಾದ ಬೆನ್ನಲ್ಲೆ ಜೆಡಿಎಸ್ ನಲ್ಲಿಯೇ ಉಳಿಯಲು ಪುಟ್ಟರಾಜು ನಿರ್ಧಾರ ಅಲ್ಲದೇ ಲೋಕಸಭೆಯ ಮೈತ್ರಿ ಅಭ್ಯರ್ಥಿಯಾಗಲು ಪುಟ್ಟರಾಜು ತಯಾರಿ
ಇದರ ನಡುವೆ ಬಹಳ ದಿನಗಳ ನಂತರ ಚಲುವರಾಯಸ್ವಾಮಿ, ಪುಟ್ಟರಾಜು ಮುಖಾಮುಖಿ ಪತ್ರಕರ್ತರ ಸಂಘದ ಕಾರ್ಯಕ್ರಮದಲ್ಲಿ ಹಾಲಿ-ಮಾಜಿ ಸಚಿವರ ಸುಮಾಗಮ ಅದೇ ವೇದಿಕೆಯಲ್ಲಿ ಕಾಂಗ್ರೆಸ್ ಸೇರಲ್ಲ ಎಂದು ಸಂದೇಶ ರವಾನಿಸಿದ ಪುಟ್ಟರಾಜು. ನಮ್ಮ ಸಚಿವರು, ಮಾಜಿ ಸಚಿವರು ಸುಮಾಗಮವಾಗಿದ್ದಾರೆಅದು ಒಳ್ಳೆಯದಕ್ಕೆ ನಾಂದಿಯಾಡಲಿ ಎಂದ ಕೈ ಶಾಸಕ ಗಣಿಗ ರವಿಕುಮಾರ್ ಪರೋಕ್ಷವಾಗಿ ಪುಟ್ಟರಾಜು ಕೈ ಪಡೆ ಸೇರ್ತಾರೆ ಎಂದ ಶಾಸಕ.
ಕೈ ಶಾಸಕನ ಮಾತಿಗೆ ನಯವಾಗಿಯೇ ಕೌಂಟರ್ ಕೊಟ್ಟ ಮಾಜಿ ಶಾಸಕರು ನಾವೂ ಈಗಾಗಲೇ ಬಿಜೆಪಿ ಜೊತೆ ಸಮ್ಮಿಲವಾಗಿದ್ದೇವೆಕಾಂಗ್ರೆಸ್ ಜೊತೆ ಸಮ್ಮಿಲವಾಗುವ ಪ್ರಶ್ನೆ ಉದ್ಭವವಾಗಲ್ಲ ಸ್ನೇಹ ಸ್ನೇಹವಾಗಿ ಇರುತ್ತೆ ಅಷ್ಟೇ ಜೊತೆಯಲ್ಲಿ ಉಂಡ್ರು ಅವರೆಕಾಳು ತಿನ್ನಬೇಡಿ ಬದನೆ ತೋಟದಲ್ಲಿ ಭಾವ ಎನ್ನಬೇಡಿ ಎಂದು ಗಾದೆ ಮಾತು ಪ್ರಸ್ತಾಪಿಸಿದ ಪುಟ್ಟರಾಜು ಆ ಮೂಲಕ ನಾನು ಕಾಂಗ್ರೆಸ್ ಸೇರ್ಪಡೆಯಾಗಲ್ಲ ಎಂದ ಮಾಜಿ ಸಚಿವ ಪುಟ್ಟರಾಜು.