ರಾಯಚೂರು : ರಾಯಚೂರಿನಲ್ಲಿ ಮಾಜಿ ಶಾಸಕ ಬಸವರಾಜ್ ದಡೇಸುಗೂರು ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. ದೇವದಾಸಿಯರ ಭೂಮಿ ವಿವಾದ ಸಂಬಂಧ ಅವಾಚ್ಯ ಶಬ್ಧಗಳಿಂದ ಮಾಡಿದ್ದಾರೆ ಎನ್ನಲಾಗಿದ್ದು, ಈ ಕುರಿತು ವಿಡಿಯೋವೊಂದು ವೈರಲ್ ಆಗಿದೆ. ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದ ಬಳಿಯ ಸರ್ವೇ ನಂಬರ್ ಸಂಬಂಧಿಸಿದಂತೆ ದೇವದಾಸಿಯರ ಜಮೀನು ವಿವಾದಗಳಿದ್ದವು. ಇದೇ ವಿಚಾರವಾಗಿ ಪ್ರಶ್ನಿಸಿದ್ದ ಜಮೀನುಗಳ ಮಾಲೀಕರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಸದ್ಯ ಘಟನೆ ಬಗ್ಗೆ ಮಾಜಿ ಶಾಸಕ ಬಸವರಾಜ್ ದಡೇಸುಗೂರು ಪ್ರತಿಕ್ರಿಯಿಸಿದ್ದು, ತುಂಗಭದ್ರಾ ನದಿಯಿಂದ ಪೈಪ್ ಲೈನ್ ಮೂಲಕ ನೀರಾವರಿ ಮಾಡಲಾಗಿದೆಇಲ್ಲಿ ಜಮೀನು ಕೊಟ್ಟಿರೋರು 50:50 ಅನುಪಾತದಲ್ಲಿ ನೀರಾವರಿ ಮಾಡಲಾಗ್ತಿದೆ. ಮೇಲ್ವರ್ಗದವರಿಗೆ ನಮ್ಮ ಸಮುದಾಯದ ಭೂಮಿ ಕೊಟ್ಟೋರು ಗಲಾಟೆ ಮಾಡುತ್ತಿದ್ದರು. ಅದನ್ನ ಪ್ರಶ್ನಿಸಿಲಾಗಿದೆ. ದೇವದಾಸಿಯ ಜಮೀನು ಕಬ್ಜಾ ಮಾಡಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.