ಬೀದರ್ : ವಿಧಾನ ಪರಿಷತ್ ಮಾಜಿ ಸದಸ್ಯ ಖಾಜಿ ಅರ್ಷದ್ ಅಲಿ ನಿಧನರಾಗಿದ್ದಾರೆ. 75 ವರ್ಷದ ಅರ್ಷದ್ ಅಲಿ ಅವರು ಹೃದಯಾಘಾತದಿಂದಾಗಿ ವಿಧಿವಶರಾಗಿದ್ದಾರೆ.
ಅರ್ಷದ್ ಅಲಿ ಅವರು ಹಿಂದಿಯ ಬೀದರ್ ಕಿ ಆವಾಜ್ ಮತ್ತು ಉರ್ದುವಿನ ಸುರ್ಖ್ ಝಮೀನ್ ಪತ್ರಿಕೆಯ ಸಂಪಾದಕಾರಿಗದ್ದರು. ಎರಡು ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದ ಅರ್ಷದ್ ಅಲಿ ಅವರು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಇಂದು ಮಧ್ಯಾಹ್ನ 1.30ಕ್ಕೆ ಬೀದರ ನಗರದ ಜಾಮೀಯಾ ಮಸೀದಿಯಲ್ಲಿ ಗೌರವ ನಮನ ಸಲ್ಲಿಸಿದ ಬಳಿಕ ಭಾಲ್ಕಿಯ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.