ಚಾಮರಾಜನಗರ: ಎಸ್.ಎಂ.ಕೃಷ್ಣ ಅವರ ಸಾವಿನ ಆಘಾತದಿಂದ ಚೇತರಿಸಿಕೊಳ್ಳುವ ಮುನ್ನವೇ ಮತ್ತೊಂದು ಆಘಾತವಾಗಿದ್ದು, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಉಗ್ರಾಣ ನಿಗಮದ ಅಧ್ಯಕ್ಷ ಜಯಣ್ಣ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.. ಗೃಹ ಪ್ರವೇಶ ಹಿನ್ನೆಲೆ ಆಹ್ವಾನ ಪತ್ರಿಕೆ ಕೊಡಲು ಮೈಸೂರಿಗೆ ತೆರಳುತ್ತಿದ್ದ ವೇಳೆ ಕೋಳ್ಳೇಗಾಲ ತಾಲೂಕಿನ ಉತ್ತಂಬಳ್ಳಿ ಬಳಿ ಜಯಣ್ಣ ಹೃದಯಾಘಾತಕ್ಕೆ ಒಳಗಾಗಿದ್ದಾರೆ.
Mutual Fund: ಈ ಮ್ಯೂಚುವಲ್ ಫಂಡ್ʼನಲ್ಲಿ ದಿನಕ್ಕೆ ಜಸ್ಟ್ 50 ರೂಪಾಯಿ ಹೂಡಿಕೆ ಮಾಡಿ 30 ಲಕ್ಷ ಗಳಿಸಿ.!
ಕಾರಿನಲ್ಲಿ ಹೋಗುತ್ತಿದ್ದ ವೇಳೆ ಏಕಾಏಕಿ ಕೆಮ್ಮು ಹಾಗೂ ಎದೆನೋವು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಅವರನ್ನು ಆಸ್ಪತ್ರೆಗೆ ಕರೆತರುವ ಮುನ್ನ ಮಾರ್ಗಮಧ್ಯೆ ಜಯಣ್ಣ ಕೊನೆಯುಸಿರೆಳೆ ದಿದ್ದಾರೆ. ಎಸ್.ಜಯಣ್ಣ 1994 ರಲ್ಲಿ ಜೆಡಿಎಸ್ ನಿಂದ ಹಾಗೂ 2013ರಲ್ಲಿ ಕಾಂಗ್ರೆಸ್ ಪಕ್ಷದಿಂದ ವಿಧಾನಸಭಾ ಚುನಾವಣೆಯಲ್ಲಿ ಕೊಳ್ಳೇಗಾಲ. ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದರು. ಪಕ್ಷ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮವಹಿಸಿ ಕೆಲಸ ಮಾಡಿದ ಜಯಣ್ಣ. ಜನಾನುರಾಗಿ ಶಾಸಕರಾಗಿದ್ದರು.